ಮಂಜೇಶ್ವರ: ಮಕ್ಕಳ ಇಂಗ್ಲಿಷ್ ಭಾಷಾ ಕಲಿಕೆಯನ್ನು ತರಗತಿ ಕೊಠಡಿಗಳಾಚೆ ವಿಸ್ತರಿಸುವ ನಿಟ್ಟಿನಲ್ಲಿ, ಬಂಗ್ರ ಮಂಜೇಶ್ವರ ಶಾಲೆಯಲ್ಲಿ ಒಂದು ತಿಂಗಳ ವಿಶೇಷ ಇಂಗ್ಲಿಷ್ ಭಾಷಾ ಪ್ರೋತ್ಸಾಹಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.


ಓದುವುದು, ಗ್ರಹಿಕೆ, ಮಾತನಾಡುವುದು ಮತ್ತು ಬರವಣಿಗೆ ಮುಂತಾದ ನೈಪುಣ್ಯಗಳನ್ನು ಬೆಳೆಸುವುದು ಇದರ ಗುರಿಯಾಗಿದೆ.

ಮಂಜೇಶ್ವರ ಎ.ಇ.ಒ. ನಾರಾಯಣ ಡಿ. ಕಾರ್ಯಕ್ರಮ ಉದ್ಘಾಟಿಸಿ, ಇಂಗ್ಲಿಷ್ ಕಲಿಕೆ ಭಯದ ವಿಷಯವಾಗದೆ ಆತ್ಮವಿಶ್ವಾಸದ ಭಾಷೆಯಾಗಬೇಕು ಎಂದರು. ಯೋಜನೆಯ ಭಾಗವಾಗಿ ‘Readers’ Booster’ ವರ್ಕ್ಶೀಟ್ ಪುಸ್ತಕಗಳನ್ನು ವಿಜಯ ರೂರಲ್ ಡೆವಲಪ್ಮೆಂಟ್ ಫೌಂಡೇಶನ್ ಮತ್ತು ಬ್ಯಾಂಕ್ ಆಫ್ ಬರೋಡಾದ ಸಹಯೋಗದೊಂದಿಗೆ ಎಲ್.ಪಿ. ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

ವಿ.ಆರ್.ಡಿ.ಎಫ್. ಸಿಇಒ ಜ್ಯೋತಿರಾಜ್ ಮುಖ್ಯ ಅತಿಥಿಯಾಗಿದ್ದರು. ಪಿ.ಟಿ.ಎ. ಅಧ್ಯಕ್ಷ ಅಶ್ರಫ್ ಬಿ.ಎಂ. ಅಧ್ಯಕ್ಷತೆ ವಹಿಸಿದ್ದರು. ಎ.ಇ.ಒ. ನಾರಾಯಣ ಡಿ. ಮತ್ತು ಬಿ.ಪಿ.ಸಿ. ಪಿ. ರಾಜಗೋಪಾಲನ್ ಅವರನ್ನು ಸನ್ಮಾನಿಸಲಾಯಿತು.

ವಾರ್ಡ್ ಸದಸ್ಯ ಟಿ. ಸಾದಿಕ್, ಎಂ.ಪಿ.ಟಿ.ಎ. ತಾಹೀರಾ, ಶಿಕ್ಷಕರಾದ ರಂಜಿತಾ ಕುಮಾರಿ, ಬೆಂಜಮಿನ್, ಮಮತಾ ಕೆ. ಶುಭ ಹಾರೈಸಿದರು. ವಿದ್ಯಾರ್ಥಿಗಳಲ್ಲಿ ಸಂವಹನ ಕೌಶಲ್ಯ ಹೆಚ್ಚಿಸುವ ಈ ಯೋಜನೆ ಶ್ಲಾಘನೀಯವಾಗಿದೆ.

