ಹೊಸಂಗಡಿ ಶ್ರೀ ಅಯ್ಯಪ ಸನ್ನಿಧಿಯಲ್ಲಿ ವಾರ್ಷಿಕ ಪ್ರತಿಷ್ಠಾ ಮಹೋತ್ಸವ: ಮೇ 2ರಂದು ನವಕಲಶಾಭಿಷೇಕ, ತುಪ್ಪಾಭಿಷೇಕ

ಶ್ರೀ ಅಯ್ಯಪ ಕ್ಷೇತ್ರ ಹೊಸಂಗಡಿ ಶ್ರೀ ಸನ್ನಿಧಿಯಲ್ಲಿ ವಾರ್ಷಿಕ ಪ್ರತಿಷ್ಠಾ ಮಹೋತ್ಸವದ ಪ್ರಯುಕ್ತ ಶ್ರೀ ಅಯ್ಯಪ್ಪ ಸ್ವಾಮಿಗೆ ನವಕಲಶಾಭಿಷೇಕ ಹಾಗೂ ತುಪ್ಪಾಭಿಷೇಕ ಕಾರ್ಯಕ್ರಮವು 02-05-2026ರಂದು ನಡೆಯಲಿದೆ. ಈ ಧಾರ್ಮಿಕ ವಿಧಿವಿಧಾನಗಳು ನಡಿಬೈಲು ಬ್ರಹ್ಮಶ್ರೀ ಗೋವಿಂದ ಭಟ್ ಅವರ ನೇತೃತ್ವದಲ್ಲಿ ನೆರವೇರಲಿವೆ.

ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 6:00 ಗಂಟೆಗೆ ಗಣಪತಿ ಹೋಮ, 8:00 ಗಂಟೆಗೆ ನಿತ್ಯಪೂಜೆ, 8:30ಕ್ಕೆ ಭಜನಾ ಕಾರ್ಯಕ್ರಮ, 11:00 ಗಂಟೆಗೆ ನವಕಲಶಾಭಿಷೇಕ ಹಾಗೂ ಮಧ್ಯಾಹ್ನ 12:00 ಗಂಟೆಗೆ ಶ್ರೀ ಅಯ್ಯಪ್ಪ ಸ್ವಾಮಿಗೆ ತುಪ್ಪಾಭಿಷೇಕ ನಡೆಯಲಿದೆ.

ಬಳಿಕ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನ ಸಮಿತಿ ಮನವಿ ಮಾಡಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!