ಜೈ ತುಳುನಾಡು ಕಾಸರಗೋಡು ಘಟಕದಿಂದ ಮರೆಯದ ಆಟಿ ಕಾರ್ಯಕ್ರಮ 27 ರಂದು

ಮಂಜೇಶ್ವರ : ಜೈ ತುಳುನಾಡುವಿನ ಕಾಸರಗೋಡು ಘಟಕದ ಆಶ್ರಯದಲ್ಲಿ ಮರೆಯದ ಆಟಿ ಮತ್ತು ಭಾಷಣ ಮತ್ತು ಪಾರ್ದನ ಸ್ಪರ್ಧೆ ಜುಲೈ 27 ರಂದು ಭಾನುವಾರ ಕಾಸರಗೋಡು ಕರಂದಕ್ಕಾಡ್ ಬಿಲ್ಲವ ಸೇವಾ ಸಂಘದಲ್ಲಿ ನಡೆಯಲಿದೆ.ಕಾರ್ಯಕ್ರಮವನ್ನು ಬಿಲ್ಲವ ಸೇವಾ ಸಂಘ ಕಾಸರಗೋಡು ಇದರ ಅಧ್ಯಕ್ಷ ರಘು ಕೆ ಮೀಪುಗುರಿ ಉಧ್ಘಾಟಿಸಲಿದ್ದಾರೆ.

ಬೆಳಗ್ಗೆ 10 30 ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಜೈ ತುಳುನಾಡು ಕಾಸರಗೋಡು ಘಟಕದ ಅಧ್ಯಕ್ಷೆ ಶ್ರೀಮತಿ ಕುಶಾಲಾಕ್ಷಿ ವಿ ಕುಲಾಲ್ ಕಣ್ವತೀರ್ಥ ಅಧ್ಯಕ್ಷತೆ ವಹಿಸಲಿದ್ದಾರೆ.ಸಾಹಿತಿ ಮತ್ತು ಜೈ ತುಳುನಾಡು ಕಾಸರಗೋಡು ಘಟಕದ ಸದಸ್ಯ ಉಮೇಶ್ ಶಿರಿಯ ಆಟಿಯ ಮಹತ್ವದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.ಹಿರಿಯ ಯಕ್ಷಗಾನ ಕಲಾವಿದ ವಾಸು ಬಾಯಾರ್ ಹಾಗೂ ಜೈ ತುಳುನಾಡು ಕೇಂದ್ರ ಸಮಿತಿಯ ಅಧ್ಯಕ್ಷ ಉದಯ ಪೂಂಜಾ ತಾರಿಪಾಡಿ ಗುತ್ತು ಮುಖ್ಯ ಅಥಿತಿಗಳಾಗಿ ಭಾಗವಹಿಸಲಿರುವರು.ಜೈ ತುಳುನಾಡು ಕಾಸರಗೋಡು ಘಟಕದ ಕಾರ್ಯದರ್ಶಿ ಹರಿಕಾಂತ ಕಾಸರಗೋಡು ಸ್ವಾಗತಿಸಲಿದ್ದಾರೆ.ಬೆಳಗ್ಗೆ 9 ಗಂಟೆಗೆ ತುಳು ಭಾಷಣ ಮತ್ತು ಪಾರ್ದನ ಸ್ಪರ್ಧೆ ಹಾಗೂ ಮಕ್ಕಳಿಂದ ತುಳು ಮಿನದನ ಎಂಬ ವಿಶಿಷ್ಟ ಕಾರ್ಯಕ್ರಮ ನಡೆಯಲಿದೆ.

SHARE
Loading spinner

One thought on “ಜೈ ತುಳುನಾಡು ಕಾಸರಗೋಡು ಘಟಕದಿಂದ ಮರೆಯದ ಆಟಿ ಕಾರ್ಯಕ್ರಮ 27 ರಂದು

  1. ಅದು ಮರೆಯದ ಆಟಿ ಅಲ್ಲ. “ಮರೆಪಂದಿ ಆಟಿ” ಕಾರ್ಯಕ್ರಮದ ಶೀರ್ಷಿಕೆ ಅದನ್ನು ಬದಲಾವಣೆ ಗೊಳಿಸುವುದು ಸರಿಯಲ್ಲ.

    Loading spinner

Leave a Reply

Your email address will not be published. Required fields are marked *

error: Content is protected !!