ಫೂಟ್ ಪಲ್ಸ್ ಥೆರಪಿ ವತಿಯಿಂದ ಆರೋಗ್ಯ ಜಾಗೃತಿ ಮತ್ತು ಥೆರಪಿಯ ಮಹತ್ವದ ಕುರಿತು ಉಚಿತ ಮಾಹಿತಿ ಶಿಬಿರವನ್ನು ಜುಲೈ 30ರಂದು (ಗುರುವಾರ) ಬೆಳಗ್ಗೆ 10 ಗಂಟೆಗೆ ಉದ್ಯಾವರ ಮಾಡದ ತೀಯಾ ಸಮಾಜ ಸಭಾಭವನದಲ್ಲಿ ಆಯೋಜಿಸಲಾಗಿದೆ.

ಶಿಬಿರದಲ್ಲಿ ಆರೋಗ್ಯದ ಕುರಿತು ಹಾಗೂ ಫೂಟ್ ಪಲ್ಸ್ ಥೆರಪಿಯ ಉಪಯೋಗ, ಅದರ ಪ್ರಯೋಜನಗಳು ಮತ್ತು ಚಿಕಿತ್ಸಾ ವಿಧಾನದ ಬಗ್ಗೆ ತಜ್ಞರು ಸವಿವರ ಮಾಹಿತಿ ನೀಡಲಿದ್ದಾರೆ.

ಈ ಥೆರಪಿಯ ಸದುಪಯೋಗ ಪಡೆದಿರುವವರು ಹಾಗೂ ಆರೋಗ್ಯದ ಬಗ್ಗೆ ಆಸಕ್ತಿ ಹೊಂದಿರುವ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ. ಜೊತೆಗೆ ತಮ್ಮ ಕುಟುಂಬದವರು, ಸ್ನೇಹಿತರು ಹಾಗೂ ಪರಿಚಯಸ್ಥರಿಗೂ ಕಾರ್ಯಕ್ರಮದ ಮಾಹಿತಿ ನೀಡಿ ಭಾಗವಹಿಸಲು ಪ್ರೋತ್ಸಾಹಿಸುವಂತೆ ಕೋರಲಾಗಿದೆ.


