ಕಾಸರಗೋಡಿನಲ್ಲಿ ಸಾಂಕ್ರಾಮಿಕ ಜ್ವರಗಳ ಅಬ್ಬರ; ಎಚ್‌1ಎನ್‌1, ಹಳದಿ ಕಾಮಾಲೆಗೆ ಇಬ್ಬರು ಬಲಿ

​ಕಾಸರಗೋಡು : ಜಿಲ್ಲೆಯಲ್ಲಿ ವಿವಿಧ ಸಾಂಕ್ರಾಮಿಕ ಜ್ವರಗಳು ತೀವ್ರವಾಗಿ ಹರಡುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿವೆ. ಎಚ್‌1ಎನ್‌1 ಸೋಂಕಿನಿಂದ ಅಜಾನೂರಿನ ಯಶೋಧ ಹಾಗೂ ಹಳದಿ ಕಾಮಾಲೆಯಿಂದ ನೀರ್ಚಾಲಿನ ಹೇಮಚಂದ್ರ (36) ಸಾವನ್ನಪ್ಪಿದ್ದಾರೆ.

​ಮೃತರ ಸಂಪರ್ಕದಲ್ಲಿದ್ದವರ ಆರೋಗ್ಯ ತಪಾಸಣೆ ಕೈಗೊಳ್ಳಲಾಗಿದೆ. ಇದರ ಜೊತೆಗೆ, ಅಂಬಲತ್ತರ ಪ್ರದೇಶದ 18 ವರ್ಷದ ಯುವಕನಿಗೆ ಅಮೀಬಿಕ್ ಮೆದುಳುಜ್ವರ ದೃಢಪಟ್ಟಿದ್ದು, ಆತನ ಸ್ಥಿತಿ ಅತಿ ಗಂಭೀರವಾಗಿದೆ.
ಸ್ಥಳೀಯ ಕೆರೆಯಲ್ಲಿ ಸ್ನಾನ ಮಾಡಿದ್ದರಿಂದ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದ್ದು, ಆ ಕೆರೆಯಲ್ಲಿಯೂ ಸ್ನಾನ ಮಾಡದಂತೆ ಮತ್ತು ಅದರಲ್ಲಿ ಮಿಂದವರು ಕಡ್ಡಾಯವಾಗಿ ವೈದ್ಯಕೀಯ ತಪಾಸಣೆ ಒಳಪಡುವಂತೆ ಆರೋಗ್ಯ ಇಲಾಖೆ ಹಾಗೂ ಪೊಲೀಸರು ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ.

​ರಾಜ್ಯದಲ್ಲಿ ಈ ವರ್ಷ ಈಗಾಗಲೇ 155 ಜನರಿಗೆ ಅಮೀಬಿಕ್ ಮೆದುಳುಜ್ವರ ಸೋಂಕು ಕಾಣಿಸಿಕೊಂಡಿದ್ದು, 41 ಮಂದಿ ಜೀವ ಕಳೆದುಕೊಂಡಿದ್ದಾರೆ. ಮುನ್ನೆಚ್ಚರಿಕೆ ವಹಿಸಲು ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!