ಮೂಡಬಿದ್ರೆಯಲ್ಲಿ ಆಗಸ್ಟ್ 1ರಂದು ಮೆಲ್ವಿನ್ ಜೋನ್ಸ್ ಪುತ್ಥಳಿ ಅನಾವರಣ

ಮೂಡಬಿದ್ರೆ: ಲಯನ್ಸ್ ಇಂಟರ್ನ್ಯಾಷನಲ್ ಜಿಲ್ಲೆ 317D ಆಶ್ರಯದಲ್ಲಿ ಆಗಸ್ಟ್ 1, 2026ರಂದು ಬೆಳಿಗ್ಗೆ 10 ಗಂಟೆಗೆ ಮೂಡಬಿದ್ರೆಯ ಲಯನ್ ಸೇವಾ ಭವನದಲ್ಲಿ ಲಯನ್ಸ್ ಸಂಸ್ಥಾಪಕರಾದ ಮೆಲ್ವಿನ್ ಜೋನ್ಸ್ (Melvin Jones) ಅವರ ಪುತ್ಥಳಿ ಅನಾವರಣ ಕಾರ್ಯಕ್ರಮ ನಡೆಯಲಿದೆ.

ಮಾಜಿ ಅಂತರರಾಷ್ಟ್ರೀಯ ನಿರ್ದೇಶಕ ಜೆ.ಪಿ. ಸಿಂಗ್ ಅವರು ಪುತ್ಥಳಿಯನ್ನು ಅನಾವರಣಗೊಳಿಸಲಿದ್ದು, ಜಿಲ್ಲೆಯ ನಿಕಟಪೂರ್ವ ರಾಜ್ಯಪಾಲ ಕುಡುಪಿ ಅರವಿಂದ್ ಶೆಣೈ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಥಮ ಉಪರಾಜ್ಯಪಾಲ ಗೋವರ್ಧನ್ ಶೆಟ್ಟಿ, ದ್ವಿತೀಯ ಉಪರಾಜ್ಯಪಾಲ ವೆಂಕಟೇಶ್ ಹೆಬ್ಬಾರ್, ಮೂಡಬಿದ್ರೆ ಟ್ರಸ್ಟ್ ಅಧ್ಯಕ್ಷರು, ವಿವಿಧ ಲಯನ್ಸ್ ಕ್ಲಬ್‌ಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಲಯನ್ಸ್ ಇಂಟರ್ನ್ಯಾಷನಲ್ ಜಿಲ್ಲೆಯ ನಿಕಟಪೂರ್ವ ಜಿಲ್ಲಾ ಸಂಪರ್ಕಾಧಿಕಾರಿ ಸುದರ್ಶನ್ ಪಡಿಯಾರ್ ವಿಟ್ಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!