ಬಿಜೆಪಿ ಯುವ ಮುಖಂಡ, ಉದ್ಯಮಿ ನಿತಿನ್ ಸುವರ್ಣ ಆತ್ಮಹತ್ಯೆ

ಮಂಗಳೂರು : ಯುವ ಬಿಜೆಪಿ ಮುಖಂಡ, ಮಂಗಳೂರು ಉತ್ತರ ಕ್ಷೇತ್ರದಲ್ಲಿ ಕ್ರಿಯಾಶೀಲ ಬಿಜೆಪಿ ಮುಖಂಡರಾಗಿದ್ದ, ಯುವ ಉದ್ಯಮಿ ನಿತಿನ್ ಸುವರ್ಣ ಆತ್ಮಹತ್ಯೆ ಮಾಡಿಕೊಂಡಿರುವ ಸಾರ್ವಜನಿಕರಲ್ಲಿ ದಿಗ್ರಮೆ ಮೂಡಿಸಿದೆ.


ನಿನ್ನ ರಾತ್ರಿ ಮಾತ್ರೆಗಳನ್ನು ಸೇವಿಸಿ ಅಸ್ವಸ್ವರಾಗಿದ್ದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಚಿಕಿತ್ಸೆಗೆ ಫಲಕಾರಿಯಾಗದೆ ಸಾವನ್ನು ಅಪ್ಪಿರುತ್ತಾರೆ . ಮಂಗಳೂರು ಉತ್ತರ ಶಾಸಕ ಡಾ. ಭಾರತ್ ಶೆಟ್ಟಿಯವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು ಅವರು ಕ್ರಿಯಾಶೀಲ ಯುವ ನಾಯಕರಾಗಿದ್ದರು.ಬಿಜೆಪಿ ಸಂಘಟನೆಯಲ್ಲಿ ಸಕ್ರಿಯರಾಗಲಿದ್ದರು .


ಪರ್ಸನಲ್ ಸಮಸ್ಯೆಯಿಂದ ಬಳಲುತ್ತಿದ್ದ ಅವರು ತಮ್ಮ ಸಮಸ್ಯೆಯನ್ನೂ ಯಾರೊಂದಿಗೂ ತಿಳಿಸಿಕೊಂಡಿರಲಿಲ್ಲ. ಯಾಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಗೊತ್ತಾಗಿಲ್ಲ ಎಂದು ಅವರ ಆತ್ಮೀಯರು ತಿಳಿಸಿದ್ದಾರೆ. ಹೋಟೆಲ್ ಸೇರಿ ಹಲವು ಉದ್ಯಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!