ಯುಡಿಎಫ್ ಸರ್ಕಾರ ಸ್ಥಳೀಯಡಳಿತ ಸಂಸ್ಥೆಗಳ ಅನುದಾನ ಕಡಿತಗೊಳಿಸಿರುವುದನ್ನು ಖಂಡಿಸಿ ಎಲ್‌ಡಿಎಫ್‌ನಿಂದ ಪೈವಳಿಕೆ ಗ್ರಾಮ ಪಂಚಾಯತ್‌ಗೆ ಪ್ರತಿಭಟನಾ ಮೆರವಣಿಗೆ

ಪೈವಳಿಕೆ : ಯುಡಿಎಫ್ ಸರ್ಕಾರ ಸ್ಥಸ್ಥಳೀಯಡಳಿತ ಸಂಸ್ಥೆಗಳಿಗೆ ನೀಡುವ ಅನುದಾನವನ್ನು ಕಡಿತಗೊಳಿಸಿರುವುದನ್ನು ಖಂಡಿಸಿ ಎಲ್‌ಡಿಎಫ್ ನೇತೃತ್ವದಲ್ಲಿ ಪೈವಳಿಗೆ ಗ್ರಾಮ ಪಂಚಾಯತ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಪೈವಳಿಗೆ ಗ್ರಾಮ ಕಚೇರಿ (ವಿಲೇಜ್ ಆಫೀಸ್) ಆವರಣದಿಂದ ಆರಂಭವಾದ ಮೆರವಣಿಗೆ ಪಂಚಾಯತ್ ಕಚೇರಿ ಆವರಣದಲ್ಲಿ ಸಮಾಪ್ತಿಯಾಯಿತು. ಕಾರ್ಯಕ್ರಮವನ್ನು ಸಿಪಿಐ(ಎಂ) ಜಿಲ್ಲಾ ಸಮಿತಿ ಸದಸ್ಯ ಸಿ.ಎ. ಸುಬೈರ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪಂಚಾಯತ್‌ಗಳ ಅನುದಾನವನ್ನು ಕಡಿತಗೊಳಿಸುವ ಮೂಲಕ ಎಲ್‌ಡಿಎಫ್ ಸರ್ಕಾರ ಜಾರಿಗೆ ತಂದಿರುವ ಕಲ್ಯಾಣ ಯೋಜನೆಗಳನ್ನು ಹಾಳುಮಾಡಲು ಯುಡಿಎಫ್ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.

ಜೊತೆಗೆ, ಪೈವಳಿಕೆ ಪಂಚಾಯತ್ ಆಡಳಿತದಲ್ಲಿ ಇರುವಂತೆಯೇ, ಕೇರಳದಲ್ಲಿಯೂ ಬಿಜೆಪಿ ಬೆಂಬಲದೊಂದಿಗೆ ಯುಡಿಎಫ್ ಆಡಳಿತ ನಡೆಸುತ್ತಿದೆ ಎಂದು ಟೀಕಿಸಿದರು. ಪಿಎಂ ಶ್ರೀ ಯೋಜನೆ ಹಾಗೂ ವಕ್ಫ್ ವಿಷಯಗಳಲ್ಲಿ ಸರ್ಕಾರ ಕೈಗೊಂಡಿರುವ ನಿಲುವು ಸಂಘ ಪರಿವಾರದ ಅಜೆಂಡಾವನ್ನು ಜಾರಿಗೊಳಿಸುವ ಪ್ರಯತ್ನದ ಭಾಗವಾಗಿದೆ ಎಂದು ಅವರು ಹೇಳಿದರು.

ಸಭೆಯ ಅಧ್ಯಕ್ಷತೆಯನ್ನು ಅಬ್ದುಲ್ ರಝಾಕ್ ಚಿಪ್ಪರ್ ವಹಿಸಿದ್ದರು. ಬೇಬಿ ಶೆಟ್ಟಿ, ಹಾರಿಸ್ ಪೈವಳಿಗೆ, ಪುರುಷೋತ್ತಮನ್ ಬಳ್ಳೂರು, ಚಂದ್ರ ನಾಯಕ್, ಬಶೀರ್ ಬಿ.ಎ. ಸೇರಿದಂತೆ ಹಲವರು ಮಾತನಾಡಿದರು. ಅಶೋಕ್ ಭಂಡಾರಿ ಸ್ವಾಗತಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!