ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಸರಗೋಡು ವತಿಯಿಂದ ಆಟಿಡೊಂಜಿ ದಿನ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಸರಗೋಡು ತಾಲೂಕಿನ ಉಳಿಯತ್ತಡ್ಕ ಕಾರ್ಯ ಕ್ಷೇತ್ರದ ಶ್ರೀ ತುಳಸಿ ಜ್ಞಾನವಿಕಾಸ ಕೇಂದ್ರ ವತಿಯಿಂದ ಆಟಿಡೊಂಜಿ ದಿನ ಆಟಿಕೂಟ ಕಾರ್ಯಕ್ರಮ ತರುಣ ಕಲಾವೃಂದ ಪರಕಿಲ್ಲದಲ್ಲಿ ಭಾನುವಾರ ನಡೆಯಿತು .

ಕಾಸರಗೋಡು ತಾಲೂಕಿನ ಮಾನ್ಯ ಯೋಜನಾಧಿಕಾರಿ ಶ್ರೀ ದಿನೇಶ್ ದೀಪ ಬೆಳಗಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು . ಶ್ರೀಮತಿ ದೀಪ ವಾಸು ಉಳಿಯ ಅಧಕ್ಷತೆ ಸ್ಥಾನ ವಹಿಸಿದರು . ಈ ಸಂದರ್ಭದಲ್ಲಿ ಗಡಿನಾಡ ಪ್ರಶಸ್ತಿ ಪಡೆದ ಕವಿ , ಸಾಹಿತಿ , ಶ್ರೀ ರಾಧಾಕೃಷ್ಣ ಉಳಿಯತ್ತಡ್ಕ ಆಟಿಯ ವಿಶೇಷತೆಗಳ ಕುರಿತು ಮಾಹಿತಿ ನೀಡಿದರು .

ಕಾಸರಗೋಡು ವಲಯದ ಮೇಲ್ವಿಚಾರಕರದ ಶ್ರೀ ಗೋಪಾಲಕೃಷ್ಣ , ಜ್ಞಾನವಿಕಾಸದ ಸಮನ್ವಯ ಅಧಿಕಾರಿ ಶ್ರೀಮತಿ ಸೌಮ್ಯ , ಉಳಿಯತ್ತಡ್ಕ ಕಾರ್ಯ ಕ್ಷೇತ್ರದ ಸೇವಾಪ್ರತಿನಿಧಿ ಶ್ರೀಮತಿ ಜ್ಯೋತಿ ಮಾಯಿಪ್ಪಾಡಿ , ಒಕ್ಕೂಟದ ಉಪಾಧ್ಯಾಕ್ಷರದ ಶ್ರೀಮತಿ ನಳಿನಾಕ್ಷಿ ಉಳಿಯತ್ತಡ್ಕ , ಸಂಘದ ಎಲ್ಲಾ ಸದಾಸ್ಯರು , ಉಪಸ್ಥಿತರಿದರು .

ಈ ಸಂದರ್ಭದಲ್ಲಿ ಎಲ್ಲಾ ಸದಸ್ಯರು ತಾವು ಸ್ವತ ಮನೆಯಲ್ಲಿ ತಯಾರಿಸಿರುವ ವಿವಿಧ ಬಗೆಯ ಖಾದ್ಯಗಳನ್ನು ಮಾಡಿ ವಿತರಿಸಿದರು . ಈ ಕಾರ್ಯಕ್ರಮವನ್ನ ಶ್ರೀಮತಿ ಜಯಶ್ರೀ ನಿರೂಪಿಸಿದರು . ಶ್ರೀಮತಿ ನಮಿತ ಸ್ವಾಗತಿಸಿ , ಶ್ರೀಮತಿ ಅಶ್ವಿನಿ ವಂದಿಸಿದರು

SHARE
Loading spinner

Leave a Reply

Your email address will not be published. Required fields are marked *

error: Content is protected !!