ಧಾರವಾಡ:ಶ್ರೀನಿಧಿ ಫೌಂಡೇಶನ್ (ರಿ.) ಕರ್ನಾಟಕ ಹಾಗೂ ಪ್ರತಿಫಲ ಫೌಂಡೇಶನ್ (ರಿ.) ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ‘ಕನ್ನಡ ಸಾಂಸ್ಕೃತಿಕ ಸಮ್ಮೇಳನ – ಗೋವಾ 2026’ ಕಾರ್ಯಕ್ರಮವು ಸೆಪ್ಟೆಂಬರ್ 27ರಂದು (ಭಾನುವಾರ) ಗೋವಾದ ವಾಸ್ಕೊದಲ್ಲಿರುವ ರವೀಂದ್ರ ಭವನದಲ್ಲಿ ನಡೆಯಲಿದೆ.

ನಾಡು, ನುಡಿ, ಸಂಸ್ಕೃತಿ, ಸಾಹಿತ್ಯ ಹಾಗೂ ಕಲೆಗಳ ಸಂಭ್ರಮದೊಂದಿಗೆ ಆಯೋಜಿಸಲಾಗಿರುವ ಈ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಸಾಧಕರಿಗೆ ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಗೌರವಿಸಲಾಗುತ್ತದೆ.

ಪ್ರಶಸ್ತಿಗೆ ಆಸಕ್ತಿಯುಳ್ಳ ಸಾಧಕರು ತಮ್ಮ ಹೆಸರನ್ನು ಆಗಸ್ಟ್ 25, 2026ರೊಳಗೆ ನೋಂದಾಯಿಸಿಕೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಹಾಗೂ ನೋಂದಣಿಗಾಗಿ 8970453123, 8197356007 ಅಥವಾ 9113628223 ಸಂಖ್ಯೆಗಳ ವಾಟ್ಸ್‌ಆಪ್ ಮೂಲಕ ವಿವರಗಳನ್ನು ಕಳುಹಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.


