ಬಂಟ್ವಾಳ : ಸೋಶಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ (SDTU) ಪುತ್ತೂರು, ಬಂಟ್ವಾಳ, ಕಡಬ, ಸುಳ್ಯ, ಬೆಳ್ತಂಗಡಿ ತಾಲೂಕುಗಳನ್ನು ಒಳಗೊಂಡ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾಗಿ ಕಾರ್ಮಿಕ ಮುಖಂಡ ಹಾಗೂ ಸಾಮಾಜಿಕ ಹೋರಾಟಗಾರ ಪಿಲಿಪ್ ಹೆನ್ರಿ ಡಿಸೋಜ ಹಾಗೂ ಉಪಾಧ್ಯಕ್ಷರಾಗಿ ಹನೀಫ್ ಟಿ ಎಸ್ ಆಯ್ಕೆಯಾಗಿದ್ದಾರೆ.

ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿಯ ಅಧ್ಯಕ್ಷರಾಗಿದ್ದ ಸಲೀಂ ಗುರುವಾಯನಕೆರೆ ಯವರು ಇತ್ತೀಚೆಗೆ SDTU ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಗಿ ಆಯ್ಕೆ ಯಾದ ಬಳಿಕ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಇಂದು ನಡೆದ ಆಯ್ಕೆ ಪ್ರಕ್ರಿಯೆ ಯಲ್ಲಿ ಜಿಲ್ಲಾ ಉಪಾಧ್ಯಕ್ಷರಾಗಿದ್ದ ಫಿಲಿಪ್ ಹೆನ್ರಿ ಡಿಸೋಜ ರವರು ಆಯ್ಕೆ ಯಾಗಿದ್ದಾರೆ, ಬಳಿಕ ಹೊಸ ಉಪಾಧ್ಯಕ್ಷರಾಗಿ ಹನೀಫ್ ಟಿ ಎಸ್ ರವರು ಆಯ್ಕೆ ಮಾಡಲಾಗಿದೆ

SDTU ಕರ್ನಾಟಕ ರಾಜ್ಯ ಸಮಿತಿಯ ಸದಸ್ಯರುಗಳಾದ ಹಮೀದ್ ಸಾಲ್ಮರ ಹಾಗೂ ಹನೀಫ್ ಮೂಳೂರು ನೇತೃತ್ವದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಿತು
ಹೊಸ ಸಮಿತಿಯ ವಿವರ
▪️ಫಿಲಿಪ್ ಹೆನ್ರಿ ಡಿಸೋಜ (ಅಧ್ಯಕ್ಷರು )
▪️ಹನೀಫ್ ಟಿ ಎಸ್ (ಉಪಾಧ್ಯಕ್ಷರು)
▪️ಸಲೀಂ ಆಲಾಡಿ (ಪ್ರಧಾನ ಕಾರ್ಯದರ್ಶಿ)
▪️ಹನೀಫ್ ನೆಲ್ಯಾಡಿ (ಕೋಶಾಧಿಕಾರಿ )
ಸಮಿತಿ ಸದಸ್ಯರು
▪️ಅಝೀಝ್ ಉಪ್ಪಿನಂಗಡಿ
▪️ಇಸಾಕ್ ತಲಪಾಡಿ
▪️ಹಮೀದ್ ಕೂರ್ನಡ್ಕ


