ಸುದರ್ಶನ್ ಅವರಿಗೆ BMS ಕೇರಳ ಲಾಟರಿ ತಲಪಾಡಿ ಘಟಕದಿಂದ ಸಹಾಯ ಹಸ್ತ

ತಲಪಾಡಿ: ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಸುದರ್ಶನ್ ಅವರಿಗೆ ಆರ್ಥಿಕ ನೆರವು ನೀಡುವ ಮೂಲಕ ಮಾನವೀಯತೆ ಮೆರೆದ BMS ಕೇರಳ ಲಾಟರಿ ತಲಪಾಡಿ ಘಟಕ.

ಕಳೆದ ಒಂದು ತಿಂಗಳ ಹಿಂದೆ ಶ್ರೀ ಶಾಸ್ತಾ ಲಾಟರಿ ತಲಪಾಡಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಸುದರ್ಶನ್ ಅವರು ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಅಪಘಾತಕ್ಕೀಡಾಗಿದ್ದರು. ಸದ್ಯ ಅವರು K.S. Hegde Hospitalನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ BMS ಕೇರಳ ಲಾಟರಿ ತಲಪಾಡಿ ಘಟಕದ ಸದಸ್ಯರು ಆಸ್ಪತ್ರೆಗೆ ಭೇಟಿ ನೀಡಿ, ಸುದರ್ಶನ್ ಅವರ ಆರೋಗ್ಯ ವಿಚಾರಿಸಿ, ಆರ್ಥಿಕ ಸಹಾಯವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ತಲಪಾಡಿ ಘಟಕದ BMS ಅಧ್ಯಕ್ಷರಾದ ಪ್ರದೀಶ್ ಭ್ರಮರಿ ಲಾಟರಿ, ಪದಾಧಿಕಾರಿಗಳಾದ ಶ್ರೀಧರ್ ಶೆಟ್ಟಿ, ಭಾಸ್ಕರ ಶೆಟ್ಟಿ, ಸುಕೇಶ್ ಬೆಜ್ಜ ಹಾಗೂ ರಮೇಶ್ ಉಪಸ್ಥಿತರಿದ್ದರು.

ಸಂಸ್ಥೆಯ ಎಲ್ಲಾ ಸದಸ್ಯರು ಒಗ್ಗೂಡಿ ಸಂಗ್ರಹಿಸಿದ ಮೊತ್ತವನ್ನು ಸುದರ್ಶನ್ ಅವರ ಕುಟುಂಬಕ್ಕೆ ಹಸ್ತಾಂತರಿಸುವ ಮೂಲಕ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಮಾನವೀಯ ನೆರವಿನ ಹಸ್ತ ಚಾಚಲಾಯಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!