ಪುತ್ತೂರು: ವಿಮೆನ್ ಇಂಡಿಯಾ ಮೂಮೆಂಟ್ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಎಂ.ಡಿ.ಎಸ್ ಪಡೀಲ್ ಸಭಾಂಗಣದಲ್ಲಿ ನಡೆಯಿತು.

ನೂತನ ಅಧ್ಯಕ್ಷೆಯಾಗಿ ಝುಹರಾ ಬನ್ನೂರು, ಉಪಾಧ್ಯಕ್ಷೆಯಾಗಿ ಶಹನಾಝ್ , ಕಾರ್ಯದರ್ಶಿಯಾಗಿ ಸಾಬಿರಾ ಉಸ್ಮಾನ್ , ಜೊತೆ ಕಾರ್ಯದರ್ಶಿಯಾಗಿ ರಶೀದ ರಫೀಕ್, ಕೋಶಾಧಿಕಾರಿಯಾಗಿ ಇಫ್ತಾನ ಹಾಗೂ ಸಮಿತಿ ಸದಸ್ಯೆಯರಾಗಿ ಆಶಿಫಾ, ಅಸ್ಮ, ಸಾಜಿದಾ, ಸಾಬಿರಾ ಆಯ್ಕೆಯಾದರು.
ಚುನಾವಣಾ ಪ್ರಕ್ರಿಯೆಯನ್ನು ವಿಮ್ ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಝಹನಾ ಹಾಗೂ ಜಿಲ್ಲಾ ಸಮಿತಿ ಸದಸ್ಯೆ ಝೀನತ್ ಗೂಡಿನಬಳಿ ನಡೆಸಿಕೊಟ್ಟರು.

ಎಸ್.ಡಿ.ಪಿ.ಐ ಪುತ್ತೂರು ವಿಧಾನಸಭಾ ಕ್ಷೇತ್ರ ಕಾರ್ಯದರ್ಶಿ ಉಸ್ಮಾನ್ ಎ.ಕೆ ನಾಯಕತ್ವ ವಿಷಯದಲ್ಲಿ ತರಬೇತಿ ನೀಡಿದರು. ಎಸ್.ಡಿ.ಪಿ.ಐ ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಸಿದ್ದೀಕ್ ಪುತ್ತೂರು ಸಮಾರೋಪ ಮಾತುಗಳನ್ನಾಡಿದರು. ಜಿಲ್ಲಾ ಸಮಿತಿ ಸದಸ್ಯೆ ಝೈಬುನ್ನಿಸಾ ಕಾರ್ಯಕ್ರಮ ನಿರೂಪಿಸಿದರು.

