ಒಂದೇ ಕುಟುಂಬದ ಆರು ಮಂದಿಗೆ ಇರಿತ : ನಾಲ್ಕು ಮಂದಿ ಬಂಧನ

​ಕಾಸರಗೋಡು: ಕೊರಕೋಡು ಬಿಲಾಲ್ ಮಸೀದಿ ಬಳಿ ನಡೆದ ಭೀಕರ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ಕು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಇಮ್ರಾನ್, ಸನಾಫ್, ಅಹಮ್ಮದ್ ಹಾಗೂ ಬಾಸಿತ್ ಬಂಧಿತ ಆರೋಪಿಗಳಾಗಿದ್ದು, ಇವರ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

​ಗಲ್ಫ್‌ನಿಂದ ಕಳುಹಿಸಿದ್ದ ಚಿನ್ನದ ಒಡವೆಗಳ ಪೈಕಿ 30 ಗ್ರಾಂ ಉಂಗುರವನ್ನು ಹಿಂದಿರುಗಿಸದ ವಿಚಾರವಾಗಿ ಉಂಟಾದ ವಿವಾದವೇ ಈ ಕೃತ್ಯಕ್ಕೆ ಕಾರಣವೆನ್ನಲಾಗಿದೆ.

ಅಂಗಡಿ ಬಳಿ ನಡೆದ ಮಾತಿನ ಚಕಮಕಿಯ ವೇಳೆ ಆರೋಪಿಗಳು 15 ವರ್ಷದ ಬಾಲಕ ಸೇರಿದಂತೆ ಜಾಫರ್ ಸಾಧಿಕ್, ಅಬ್ದುಲ್ ಕರೀಂ, ಅಹಮ್ಮದ್ ಶಹೀದ್, ಅಬ್ದುಲ್ ಫತಾಹ್ ಹಾಗೂ ಮುಹಮ್ಮದ್ ಮರ್ವಾನ್ ಎಂಬುವರಿಗೆ ಇರಿದು ಗಾಯಗೊಳಿಸಿದ್ದರು.

ದೂರುದಾರನ ತಂದೆ ಚಿನ್ನದ ಬಗ್ಗೆ ಪ್ರಶ್ನಿಸಿದ್ದರ ದ್ವೇಷದಿಂದ ಈ ಹಲ್ಲೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!