ಹಿಂದಿ ಶಿಕ್ಷಕ ಚಂದ್ರ ನಾಯ್ಕ್ ಟಿ, ಇವರಿಗೆ ವ್ಯಾಲ್ಯೂ ಅವಾರ್ಡ್ 2026
ಮಂಗಳೂರಿನ ಆಕ್ಸಿಸ್ ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ ಕಂಪನಿಯಿಂದ ವಿವಿಧ ಕ್ಷೇತ್ರ ಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಕೊಡಮಾಡಲ್ಪಡುವ ವ್ಯಾಲ್ಯೂ ಅವಾರ್ಡ್ -2026 ಪ್ರಶಸ್ತಿಗಳಲ್ಲಿ ನಿಟ್ಟೆಯ ಡಾ llಎನ್. ಎಸ್. ಎ. ಎಂ. ಕನ್ನಡ ಮಾಧ್ಯಮ ಪ್ರೌಢ ಶಾಲೆಯ ಹಿಂದಿ ಭಾಷಾ ಶಿಕ್ಷಕ ಹಾಗೂ ಹಿರಿಯ ಶಿಕ್ಷಕ ಶ್ರೀ. ಚಂದ್ರ ನಾಯ್ಕ್ ಟಿ ಇವರಿಗೆ ಇವರ ಶೈಕ್ಷಣಿಕ ಹಾಗೂ ಸಾಹಿತ್ಯ ಸೇವೆಯನ್ನು, ಸಾಮಾಜಿಕ ಕಲಾ ಸೇವೆಯನ್ನು ಗುರುತಿಸಿ ವಿಮಾ ಸಂಸ್ಥೆಯು ತನ್ನ ವ್ಯಾಲ್ಯೂ ಅವಾರ್ಡ್ -2026 ಶಿಕ್ಷಾ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.



ಮಂಗಳೂರಿನ ಅತ್ತಾವರದಲ್ಲಿರುವ ಆಕ್ಸಿಸ್ ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ ಕಂಪನಿಯ ಸಭಾಂಗಣದಲ್ಲಿ ನಡೆದ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯಕಾರಿಣಿ ಸಮಿತಿಯ ಮುಖ್ಯಸ್ಥರು ಶ್ರೀ ಪ್ರಜ್ವಲ್,ಮ್ಯಾನೇಜರ್ ಶ್ರೀ ಮತಿ ದಿವ್ಯ ಮತ್ತಿತರ ಗಣ್ಯರು ಭಾಗವಹಿಸಿದ್ದರು.




