ಕಾಸರಗೋಡು: ಕಸದ ನಡುವೆ ಸಿಕ್ಕ 2 ಪವನ್ ಚಿನ್ನ, ₹30 ಸಾವಿರ ವಾರಸುದಾರರಿಗೆ ಹಸ್ತಾಂತರ

ಕಾಸರಗೋಡು: ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿ ವೇಳೆ ಸಿಕ್ಕ ಎರಡು ಪವನ್ ಚಿನ್ನಾಭರಣ ಹಾಗೂ 30 ಸಾವಿರ ರೂಪಾಯಿ ನಗದನ್ನು ಯಾವುದೇ ಆಶೆಗೆ ಒಳಗಾಗದೆ ವಾರಸುದಾರರಿಗೆ ಹಿಂದಿರುಗಿಸುವ ಮೂಲಕ ಪಳ್ಳಿಕ್ಕರೆ ಪಂಚಾಯತ್‌ನ ಹಸಿರು ಕ್ರಿಯಾ ಸೇನೆ ಕಾರ್ಯಕರ್ತೆಯರು ಮಾನವೀಯತೆ ಮೆರೆದಿದ್ದಾರೆ.

​ಪೊಯಿನಾಚಿ ಪರಂಬ್‌ನ ಕೃಷ್ಣ ಎಂಬವರ ಮನೆಯ ತ್ಯಾಜ್ಯ ಸಂಗ್ರಹಿಸುತ್ತಿದ್ದ ಕಮಲ ಎನ್. ಹಾಗೂ ಮಮತ ಅವರಿಗೆ ಪ್ಲಾಸ್ಟಿಕ್ ಚೀಲದೊಳಗೆ ಕಾಗದದಲ್ಲಿ ಸುತ್ತಿಟ್ಟಿದ್ದ ಈ ಬೆಲೆಬಾಳುವ ವಸ್ತುಗಳು ಪತ್ತೆಯಾಗಿವೆ.

ಇತ್ತೀಚೆಗೆ ನಿಧನರಾದ ಕೃಷ್ಣ ಅವರ ಪತ್ನಿ ಜಾನಕಿ ಬಳಸುತ್ತಿದ್ದ ಚೀಲವನ್ನು ಕಸದೊಂದಿಗೆ ಸೇರಿಸಿ ನೀಡಲಾಗಿತ್ತು.
​ಕೂಡಲೇ ಎಚ್ಚೆತ್ತ ಪ್ರಾಮಾಣಿಕ ಕಾರ್ಯಕರ್ತೆಯರು ಆ ಸಂಪತ್ತನ್ನು ಮಾಲೀಕರಿಗೇ ಒಪ್ಪಿಸಿದರು. ಇವರ ಈ ದೊಡ್ಡ ಮನಸ್ಸಿಗೆ ಕುಟುಂಬಸ್ಥರು ಹಾಗೂ ಸಾರ್ವಜನಿಕ ವಲಯದಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!