ಹುಣಸೂರಿನಲ್ಲಿ ಪೂಚ್ಚಕ್ಕಾಡ್ ಮೂಲದ ಯುವತಿ ಅನುಮಾನಾಸ್ಪದ ಸಾವು

ಕಾಸರಗೋಡು: ಕರ್ನಾಟಕದ ಹುಣಸೂರಿನಲ್ಲಿ ಪೂಚ್ಚಕ್ಕಾಡ್ ಮೂಲದ ಯುವತಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪೂಚ್ಚಕ್ಕಾಡ್ ಕಾಟಾಂಪಳ್ಳಿ ನಿವಾಸಿ ಅನುಶ್ರೀ (25) ಮೃತಪಟ್ಟ ಯುವತಿ.

ವಾಸವಿದ್ದ ಸ್ಥಳದಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಸಂಬಂಧಿಕರಿಗೆ ಲಭಿಸಿದೆ. ಅನುಶ್ರೀ ಹುಣಸೂರಿನಲ್ಲಿ ಬ್ಯಾಂಕ್ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರು.

ಡಿಸೆಂಬರ್ 26ರಂದು ಅನುಶ್ರೀ ಅವರ ವಿವಾಹ ನಿಶ್ಚಯವಾಗಿತ್ತು ಎಂದು ತಿಳಿದುಬಂದಿದೆ. ಘಟನೆ ಕುರಿತು ಮಾಹಿತಿ ತಿಳಿದ ಬಳಿಕ ಸಂಬಂಧಿಕರು ಹುಣಸೂರಿಗೆ ತೆರಳಿದ್ದಾರೆ.ಅನುಶ್ರೀ ಅವರು ಪೂಚ್ಚಕ್ಕಾಡ್ ನಿವಾಸಿ ಕೆ. ಚಂದ್ರನ್ ಹಾಗೂ ರೀನಾ ದಂಪತಿಯ ಪುತ್ರಿ.

SHARE
Loading spinner

Leave a Reply

Your email address will not be published. Required fields are marked *

error: Content is protected !!