ಕಾಸರಗೋಡಿನಲ್ಲಿ ನಿಯಂತ್ರಣ ತಪ್ಪಿ ಶಾಲಾ ಬಸ್ ರಸ್ತೆ ಬದಿಯ ಹೊಂಡಕ್ಕೆ ಪಲ್ಟಿ

ಕಾಸರಗೋಡು: ನಿಯಂತ್ರಣ ತಪ್ಪಿದ ಶಾಲಾ ಬಸ್ ರಸ್ತೆ ಬದಿಯ ಹೊಂಡಕ್ಕೆ ಪಲ್ಟಿಯಾದ ಘಟನೆ ನಡೆದಿದೆ. ಬಸ್‌ನಲ್ಲಿದ್ದ ವಿದ್ಯಾರ್ಥಿಗಳು ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.

ಗುರುವಾರ ಬೆಳಗ್ಗೆ ಸುಮಾರು 9.30ರ ವೇಳೆಗೆ ನೆಲ್ಲಿಕುನ್ನು ಬಂಕಾರಕುನ್ನು ಎಂಬಲ್ಲಿ ಅಪಘಾತ ಸಂಭವಿಸಿದೆ. ನೆಲ್ಲಿಕುನ್ನು ಅನ್ವಾರುಲ್ ಉಲೂಂ ಎಯುಪಿ ಶಾಲೆಯ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಅಪಘಾತಕ್ಕೀಡಾಗಿದೆ. ಶಾಲೆಯ ಸಮೀಪದಲ್ಲೇ ಕಾರ್ಯನಿರ್ವಹಿಸುತ್ತಿರುವ ತಂಙಳ್ ಉಪ್ಪಪ್ಪಾ ಇಂಗ್ಲಿಷ್ ಮೀಡಿಯಂ ಶಾಲೆಯ ಎಲ್‌ಕೆಜಿ ಮತ್ತು ಯುಕೆಜಿ ವಿದ್ಯಾರ್ಥಿಗಳೂ ಬಸ್‌ನಲ್ಲಿದ್ದರು.

ರಸ್ತೆಗೆ ಚಾಚಿಕೊಂಡಿದ್ದ ಪೊದೆಗಳು ಮಕ್ಕಳಿಗೆ ತಾಗದಂತೆ ತಪ್ಪಿಸಲು ಚಾಲಕ ಬಸ್‌ನ್ನು ಬದಿಗೆ ತಿರುಗಿಸಿದಾಗ ನಿಯಂತ್ರಣ ತಪ್ಪಿದೆ ಎನ್ನಲಾಗಿದೆ. ಬಳಿಕ ಬಸ್ ರಸ್ತೆ ಬದಿಯ ಹೊಂಡದಲ್ಲಿದ್ದ ಬಳ್ಳಿಕಾಡಿನೊಳಗೆ ಪಲ್ಟಿಯಾಗಿದೆ.

ಬಂಕಾರಕುನ್ನು ಪ್ರದೇಶದ ರಸ್ತೆ ಹಲವು ತಿಂಗಳುಗಳಿಂದ ಹದಗೆಟ್ಟ ಸ್ಥಿತಿಯಲ್ಲಿದೆ. ದೊಡ್ಡ ದೊಡ್ಡ ಹೊಂಡಗಳಿಂದ ಕೂಡಿರುವ ಈ ರಸ್ತೆಯಲ್ಲಿ ಸಂಚಾರ ದುಸ್ತರವಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!