ಕಾಸರಗೋಡು: ಮದುವೆಗೆ ದಿನಗಣನೆ ಶುರುವಾಗಿದ್ದ ವೇಳೆ, ಬ್ಯಾಂಕ್ ಉದ್ಯೋಗಿಗಳಾದ ಯುವತಿ ಹಾಗೂ ಯುವಕ ಬೇರೆ ಬೇರೆ ಸ್ಥಳಗಳಲ್ಲಿ ಅನುಮಾನಾಸ್ಪದ ರೀತಿಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪೂಚಕ್ಕಾಡ್ನ ಅನುಶ್ರೀ (25) ಹಾಗೂ ಕಣ್ಣೂರಿನ ವಿ. ಅಮಲ್ (26) ಸಾವಿಗೀಡಾದ ದುರ್ದೈವಿಗಳು. ಅನುಶ್ರೀ ಹುಣಸೂರಿನ ಎಸ್ಬಿಐ ಶಾಖೆಯಲ್ಲಿ ಮತ್ತು ಅಮಲ್ ಎರ್ನಾಕುಳಂ ಎಂ.ಜಿ ರೋಡ್ ಎಸ್ಬಿಐ ಶಾಖೆಯಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ಹುಣಸೂರಿನ ವಾಸಸ್ಥಳದಲ್ಲಿ ಅನುಶ್ರೀ ಮೊದಲು ಸಾವನ್ನಪ್ಪಿದ್ದು, ಇದರ ಬೆನ್ನಲ್ಲೇ ಎರ್ನಾಕುಳಂನಲ್ಲಿ ಅಮಲ್ ಕೂಡ ಶವವಾಗಿ ಪತ್ತೆಯಾಗಿದ್ದಾರೆ. ಆತ್ಮಹತ್ಯೆಗೂ ಮುನ್ನ ಅನುಶ್ರೀ ಅಮಲ್ಗೆ ವೀಡಿಯೊ ಕರೆ ಮಾಡಿದ್ದರು ಎನ್ನಲಾಗಿದೆ. ಮುಂಬರುವ ಡಿಸೆಂಬರ್ 26ರಂದು ಇವರ ವಿವಾಹ ನಿಗದಿಯಾಗಿತ್ತು. ಈ ದಿಢೀರ್ ಪ್ರಾಣತ್ಯಾಗಕ್ಕೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ.


