ನಾಟಕ ಕಲಾವಿದರು,ಸಂಗೀತಗಾರರ ಮಾಹಿತಿಗಾಗಿ ಕೋರಿಕೆ

ಕನ್ನಡ ಭಾಷೆಯಲ್ಲಿ ನಾಟಕಗಳಲ್ಲಿ ನಟರಾಗಿ ಪಾತ್ರ ಮಾಡಿರುವ, ನಿರ್ದೆಶಕರಾಗಿ ಕೆಲಸ ಮಾಡಿರುವವರು ತಮ್ಮ ಮಾಹಿತಿ ಒದಗಿಸಬೇಕು. ಸಂಗೀತ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದವರು ಸಹ‌ ತಮ್ಮ ಮಾಹಿತಿ ನೀಡಬಹುದು. ತಮ್ಮ ಮಾಹಿತಿಯನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವದು. ಸೂಕ್ತವಾದವುಗಳನ್ನು ಪತ್ರಿಕೆಯಲ್ಲಿ ಲೇಖನವಾಗಿ ಪ್ರಕಟಿಸಲಾಗುವದು. ನಾಟಕ ಕ್ಷೇತ್ರ ಮತ್ತು ಸಂಗೀತ ಕ್ಷೇತ್ರದ ಸಾಧಕರು ತಮ್ಮ ಪೂರ್ಣ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ವಿದ್ಯಾರ್ಹತೆ, ಜನನ ದಿನಾಂಕ, ಜನನ ಗ್ರಾಮ, ಆಯಾ ಕ್ಷೇತ್ರದಲ್ಲಿ ತಮಗೆ ಆಸಕ್ತಿ ಬಂದಿರುವ ವಿವರಗಳನ್ನು ನೀಡಬೇಕು. ಸಾಧನೆ ಮಾಡಿದ ಕ್ಷೇತ್ರದಲ್ಲಿನ ಮಾಹಿತಿ, ಪಾತ್ರ ಮಾಡಿದ ನಾಟಕಗಳ ಹೆಸರು, ಯಾವ ಸ್ಥಳದಲ್ಲಿ ಪಾತ್ರ ಮಾಡಲಾಗಿದೆ. ಸಾಧಕರಿಗೆ ಬಂದಿರುವ ಪ್ರಶಸ್ತಿಗಳ ವಿವರ ಇತ್ಯಾದಿ ಮಾಹಿತಿ ಸಲ್ಲಿಸಬೇಕು.ಕರ್ನಾಟಕ ಸರಕಾರದಿಂದ ಪ್ರಶಸ್ತಿ ಲಭಿಸಿದ್ದರೆ ಯಾವ ವರ್ಷದಲ್ಲಿ ಪ್ರಶಸ್ತಿ ಲಭಿಸಿದೆ ಎಂಬ ವಿವರಗಳಿರಬೇಕು. ಬೇರೆ ರಾಜ್ಯ ಮತ್ತು ವಿದೇಶದಲ್ಲಿ ಕಾರ್ಯಕ್ರಮ ನೀಡಿದ್ದರೆ ವಿವರ ಸಲ್ಲಿಸಬೇಕು.


ಸಿನೇಮಾ ಕಲಾವಿದರು, ಟಿವಿ ದಾರಾವಾಹಿಗಳಲ್ಲಿ ನಟ, ನಟಿಯರಾಗಿ, ಪೋಷಕರಾಗಿ ನಟಿಸಿದವರು, ವಸ್ತ್ರವಿನ್ಯಾಸಗಾರರು, ಕಂಠದಾನಿಗಳು, ಹಿನ್ನೆಲೆ ಗಾಯಕರು, ತಮ್ಮ ಸಾಧನೆಗಳ ವಿವರಗಳನ್ನು ಸಲ್ಲಿಸಬೇಕು.


ಸಂಗೀತ ಕ್ಷೇತ್ರದ ಸಾಧಕರ ಗಮನಕ್ಕೆ
ಸಂಗೀತಗಾರರು, ಸಂಗೀತ ನಿರ್ದೆಶಕರು ಇದೇ ಮಾದರಿಯಲ್ಲಿ ಮಾಹಿತಿ ನೀಡಬೇಕು. ತಾವು ಯಾವ ಸಂಗೀತ ಪರಿಕರ ನುಡಿಸುವಲ್ಲಿ ಪರಿಣಿತರಾಗಿದ್ದಿರಿ. ಸಾಧನೆಗಳ ವಿವರ, ಪ್ರಶಸ್ತಿಗಳ ಮಾಹಿತಿ, ವಿಳಾಸ,ಮೊಬೈಲ್ ಸಂಖ್ಯೆ ಇನ್ನಿತರ ಮಾಹಿತಿ ನೀಡಬೇಕು. ಈ ಎಲ್ಲ ಮಾಹಿತಿಗಳನ್ನು ಮೊಬೈಲ್ ದಲ್ಲಿ ಟೈಪ ಮಾಡಿದ್ದರೆ ಒಳ್ಳೆಯದು. ಅಥವಾ ಪಿಡಿಎಪ್ ಮೂಲಕ ಮಾಹಿತಿ ಒದಗಿಸಬೇಕು. ಇದರೊಂದಿಗೆ ಕಲಾವಿದರು, ಸಂಗೀತ ಕ್ಷೇತ್ರದ ಸಾಧಕರು ತಮ್ಮ ಭಾವಚಿತ್ರ ಮತ್ತು ಕಾರ್ಯಕ್ರಮದಲ್ಲಿ ಭಾಗವಹಿಸಿದ ಪೋಟೊ ಕಳಿಸಿರಿ. ಮಾಹಿತಿ ಕಳಿಸಿದವರು. ಮಾಹಿತಿ ಕಳಿಸಿದ ನಂತರ ಪೋನ ಮಾಡಿ ಮಾಹಿತಿ ಕಳಿಸಿದ ಬಗ್ಗೆ ತಿಳಿಸಬೇಕು. ಏನಾದರೂ ಹೆಚ್ಚಿನ ಮಾಹಿತಿ ಬೇಕಿದ್ದರೆ ಕೆಳಗೆ ನೀಡಿದ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬೇಕು. ಮಾಹಿತಿಯನ್ನು ಈ ಕೆಳಗಿನ ಮೊಬೈಲ್ ಸಂಖ್ಯೆಗೆ ಸಲ್ಲಿಸಿರಿ.


ಸಿ.ವಾಯ್.ಮೆಣಸಿನಕಾಯಿ ಸಾಹಿತಿ ಪತ್ರಕರ್ತರು, ಬೆಳಗಾವಿ ಮೊ.8050168504 ಇಮೇಲ್ cymenashinakai@gmail.com ಅಥವಾ ಶಿವರಾಮ ಕಾಸರಗೋಡು ಅಧ್ಯಕ್ಷರು, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಕಾಸರಗೋಡು, ಕೇರಳ ಮೊಬೈಲ್ ಸಂಖ್ಯೆ.9448572016 ಇಮೇಲ್
shivaramakasaragod@gmail.com ಇಲ್ಲಿಗೆ ಕಳಿಸಬೇಕು.

SHARE
Loading spinner

Leave a Reply

Your email address will not be published. Required fields are marked *

error: Content is protected !!