ಮಂಜೇಶ್ವರ: ಓಣಂ ವಿಶೇಷ ಡ್ರೈವ್ನ ಭಾಗವಾಗಿ ನಡೆಸಿದ ತಪಾಸಣೆಯ ವೇಳೆ ಕಾರಿನಲ್ಲಿ ಕೊಂಡೊಯ್ಯುತ್ತಿದ್ದ 162 ಗ್ರಾಂ ಎಂಡಿಎಂಎ ಡ್ರಗ್ಸ್ ಅನ್ನು ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಎಕ್ಸೈಸ್ ತಂಡ ಬಂಧಿಸಿದೆ. ಮಂಜೇಶ್ವರ ತಾಲೂಕಿನ ಎಣ್ಮಕಜೆ ಗ್ರಾಮದ ಒರ್ಮೊಡಿ ಕಂದಿಗೆ ದೇಶದ ಅಬೂಬಕರ್ ಎಂಬವರ ಮಗ ಅಬ್ದುಲ್ ಅಸೀಸ್ ಬಂಧಿತ ಆರೋಪಿಯಾಗಿದ್ದಾನೆ.


ಬದಿಯಡ್ಕ ಎಕ್ಸೈಸ್ ರೇಂಜ್ ಇನ್ಸ್ಪೆಕ್ಟರ್ ಜಿಷ್ಣು ಪಿ.ಆರ್ ಮತ್ತು ಅವರ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಈ ಆರೋಪಿಯನ್ನು ಬಂಧಿಸಿದ್ದಾರೆ.
ಓಣಂ ಹಬ್ಬದ ಹಿನ್ನೆಲೆಯಲ್ಲಿ ಮಾದಕ ವಸ್ತುಗಳ ಕಳ್ಳಸಾಗಣೆ ತಡೆಯಲು ರಾಜ್ಯಾದ್ಯಂತ ಕಟ್ಟುನಿಟ್ಟಿನ ತಪಾಸಣೆ ಮುಂದುವರಿದಿದ್ದು, ಈ ವೇಳೆ ಖಚಿತ ಮಾಹಿತಿಯ ಮೇರೆಗೆ ಕಾರನ್ನು ತಡೆದು ಈ ದೊಡ್ಡ ಪ್ರಮಾಣದ ನಿಷೇಧಿತ ಮದ್ಯ ಹಾಗೂ ಡ್ರಗ್ಸ್ ಬೇಟೆಯಾಡಲಾಗಿದೆ. ಆರೋಪಿಯ ವಿರುದ್ಧ NDPS ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.


