ಮಂಜೇಶ್ವರದಲ್ಲಿ 162 ಗ್ರಾಂ ಎಂಡಿಎಂಎ ವಶಕ್ಕೆ: ಒಬ್ಬ ಸೆರೆ

​ಮಂಜೇಶ್ವರ: ಓಣಂ ವಿಶೇಷ ಡ್ರೈವ್‌ನ ಭಾಗವಾಗಿ ನಡೆಸಿದ ತಪಾಸಣೆಯ ವೇಳೆ ಕಾರಿನಲ್ಲಿ ಕೊಂಡೊಯ್ಯುತ್ತಿದ್ದ 162 ಗ್ರಾಂ ಎಂಡಿಎಂಎ ಡ್ರಗ್ಸ್ ಅನ್ನು ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

​ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಎಕ್ಸೈಸ್ ತಂಡ ಬಂಧಿಸಿದೆ. ಮಂಜೇಶ್ವರ ತಾಲೂಕಿನ ಎಣ್ಮಕಜೆ ಗ್ರಾಮದ ಒರ್ಮೊಡಿ ಕಂದಿಗೆ ದೇಶದ ಅಬೂಬಕರ್ ಎಂಬವರ ಮಗ ಅಬ್ದುಲ್ ಅಸೀಸ್ ಬಂಧಿತ ಆರೋಪಿಯಾಗಿದ್ದಾನೆ.

​ಬದಿಯಡ್ಕ ಎಕ್ಸೈಸ್ ರೇಂಜ್ ಇನ್ಸ್‌ಪೆಕ್ಟರ್ ಜಿಷ್ಣು ಪಿ.ಆರ್ ಮತ್ತು ಅವರ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಈ ಆರೋಪಿಯನ್ನು ಬಂಧಿಸಿದ್ದಾರೆ.

ಓಣಂ ಹಬ್ಬದ ಹಿನ್ನೆಲೆಯಲ್ಲಿ ಮಾದಕ ವಸ್ತುಗಳ ಕಳ್ಳಸಾಗಣೆ ತಡೆಯಲು ರಾಜ್ಯಾದ್ಯಂತ ಕಟ್ಟುನಿಟ್ಟಿನ ತಪಾಸಣೆ ಮುಂದುವರಿದಿದ್ದು, ಈ ವೇಳೆ ಖಚಿತ ಮಾಹಿತಿಯ ಮೇರೆಗೆ ಕಾರನ್ನು ತಡೆದು ಈ ದೊಡ್ಡ ಪ್ರಮಾಣದ ನಿಷೇಧಿತ ಮದ್ಯ ಹಾಗೂ ಡ್ರಗ್ಸ್ ಬೇಟೆಯಾಡಲಾಗಿದೆ. ಆರೋಪಿಯ ವಿರುದ್ಧ NDPS ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!