ಕುಂಬಳೆ ಗ್ರಾಮ ಪಂಚಾಯತ್ ಹಾಗೂ ಕುಂಬಳೆ ಕೃಷಿ ಭವನದ ಸಂಯುಕ್ತ ಆಶ್ರಯದಲ್ಲಿ ಈ ವರ್ಷದ ರೈತ ದಿನಾಚರಣೆ ಕುಂಬಳೆ ಸರ್ವಿಸ್ ಕೋ-ಆಪರೇಟಿವ್ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು. ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.


ಕುಂಬಳೆ ಗ್ರಾಮ ಪಂಚಾಯತ್ ಅಧ್ಯಕ್ಷ ವಿ.ಪಿ. ಅಬ್ದುಲ್ ಖಾದರ್ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಅಧಿಕಾರಿ ನಾಣುಕುಟ್ಟನ್ ಸ್ವಾಗತಿಸಿದರು.


ಕುಂಬಳೆ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಬಲ್ಕೀಸ್, ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯ ಅಜೀಸ್ ಕಲತ್ತೂರು, ಕಾಸರಗೋಡು ಬ್ಲಾಕ್ ಪಂಚಾಯತ್ ಅಭಿವೃದ್ಧಿ ಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಲೆ, ಕುಂಬಳೆ ಪಂಚಾಯತ್ ಆರೋಗ್ಯ–ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಖಾಲಿದ್ ಎಂ.ಪಿ., ಕ್ಷೇಮಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಫಾತಿಮತ್ ಇನಾಸ್ ಕೊಹಿನೂರ್, ಬ್ಲಾಕ್ ಪಂಚಾಯತ್ ಸದಸ್ಯ ಪೃಥ್ವಿರಾಜ್ ಜಗನ್ನಾಥ ಶೆಟ್ಟಿ, ಪಂಚಾಯತ್ ಸದಸ್ಯ ಮಂಜುನಾಥ ಆಳ್ವ, ಕೌಸೀರ್ ಜಿ.ಎಂ. ಸೇರಿದಂತೆ ಹಲವರು ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಈ ವರ್ಷದ ಅತ್ಯುತ್ತಮ ರೈತರು ಎಂದು ಗುರುತಿಸಿ ಪಾಲಕ್ಷ ಶೆಟ್ಟಿ ಕಿದೂರು, ದೇವಕಿ ಆರಿಕಾಡಿ, ಅಬ್ದುಲ್ಲಾ ಇಚಿಲಂಪಾಡಿ, ಸುಬೈಯ್ಯ ರೈ ಮದ್ವ, ಅಬೂಬಕರ್ ಬಂಬ್ರಾಣ ಬಯಲ್, ನಾರಾಯಣ ಪಾಟಾಳಿ ಸೂರಂಬಯಲ್, ಚನಿಯ ಕೋಟೇಕಾರ್ ಮಾಸ್ಟರ್ ಹಾಗೂ ದಕ್ಷಿತ್ ಎಂ. ಬಂಬ್ರಾಣ ಅವರನ್ನು ಗೌರವಿಸಲಾಯಿತು.
ಬಳಿಕ ಕಿಸಾನ್ ಕ್ರೆಡಿಟ್ ಕಾರ್ಡ್ ಕುರಿತು ಕೇರಳ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕಿ ಶಿಮ್ನಾ ಚಂದ್ರ ಮಾಹಿತಿ ನೀಡಿದರು.
ಸಹಾಯಕ ಕೃಷಿ ಅಧಿಕಾರಿ ಶ್ರೀಹರಿ ವಳ್ಳಿಯಾಡನ್ ವಂದಿಸಿದರು.


[8664]Linebet Official Login | বিকাশ পেমেন্ট ও সেরা ক্যাসিনো বোনাস,linebet-এ লগইন করে সেরা অনলাইন ক্যাসিনো বোনাস উপভোগ করুন। বিকাশ দিয়ে সহজে পেমেন্ট এবং অ্যাপ ডাউনলোড করে স্লট গেম খেলুন। আজই যোগ দিন। visit: linebet
[4851]agenolx | Login Resmi Link Alternatif Slot Gacor Terpercaya,agenolx menyediakan link alternatif resmi untuk akses situs slot gacor hari ini. Nikmati kemudahan cara deposit via dana dan judi casino online terpercaya. Gabung sekarang! visit: agenolx
[9767]Arena Plus Login at App Download | Maglaro ng Slots at Baccarat,Gamitin ang arena plus login para mag-enjoy sa slots at baccarat. Alamin kung paano maglaro ng slots at mabilis ang legit casino gcash withdrawal. Sali na! visit: arena plus