ಮಂಜೇಶ್ವರ : ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಹಾಗೂ ಪ್ರಜಾಪ್ರಭುತ್ವ ಮತ್ತು ಫೆಡರಲಿಸಂ ಮೌಲ್ಯಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಸಿಪಿಐ ವತಿಯಿಂದ ‘ದೆಹಲಿ ಚಲೋ’ ಪ್ರಚಾರ ಜಾಥಾ ನಡೆಯಿತು.

ಪೈವಳಿಕೆ ಲೋಕಲ್ ಸಮಿತಿ ನೇತೃತ್ವದಲ್ಲಿ ಬಾಯಾರಿನಲ್ಲಿ ಆಯೋಜಿತ ಕಾರ್ಯಕ್ರಮಕ್ಕೆ ಶಾಸಕ ಗೋವಿಂದನ್ ಪಳ್ಳಿಕ್ಕಾಪ್ಟಿಲ್ ಚಾಲನೆ ನೀಡಿದರು.

ಚಣಿಯಾ ಕೊಮ್ಮಂಗಳ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ಪ್ರಮುಖ ಮುಖಂಡರು ಭಾಗವಹಿಸಿದ್ದರು. ಜಾಥಾ ನಾಯಕ ಸುದಾನಂದ ಎ. ಹಾಗೂ ಮ್ಯಾನೇಜರ್ ವಲ್ಟಿ ಡಿ.ಸೋಜ ನೇತೃತ್ವ ನೀಡಿದರು. ಬಾಯಿಕಟ್ಟೆಯಲ್ಲಿ ನಡೆದ ಸಮಾರೋಪ ಸಮಾರಂಭಕ್ಕೆ ಮಾಜಿ ಸಚಿವ ಇ. ಚಂದ್ರಶೇಖರನ್ ಚಾಲನೆ ನೀಡಿ ಮಾತನಾಡಿದರು. ಅಜಿತ್ ಎಂ.ಸಿ. ಅಧ್ಯಕ್ಷತೆ ವಹಿಸಿದ್ದರು.

