​ಕಾಸರಗೋಡು: ಲಾಡ್ಜ್‌ಗೆ ಕರೆದೊಯ್ದು ಕಿರುಕುಳ ಆರೋಪ; ಇಬ್ಬರು ಸೆರೆ

ಕಾಸರಗೋಡು: ಜಿಲ್ಲೆಯಲ್ಲಿ ನಡೆದ ಪ್ರತ್ಯೇಕ ಪೋಕ್ಸೋ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮೊದಲ ಪ್ರಕರಣದಲ್ಲಿ ಮಂಜೇಶ್ವರದ ರಿಸ್ವಾನ್ (23) ಹಾಗೂ ಮುಹಮ್ಮದ್ ಸ್ವಾದ್ (19) ಎಂಬುವರನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ.

ಸಾಮಾಜಿಕ ಜಾಲತಾಣಗಳ ಮೂಲಕ ಬಾಲಕಿಯರೊಂದಿಗೆ ಪರಿಚಯ ಮಾಡಿಕೊಂಡು, ಉಳ್ಳಾಲದ ಲಾಡ್ಜಿಗೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಇವರ ಮೇಲಿದೆ.

​ಇನ್ನೊಂದು ಪ್ರಕರಣದಲ್ಲಿ ಬಂದ್ಯೋಡು ಮಳ್ಳಂಗೈ ನಿವಾಸಿ ನಿಸಾಮುದ್ದೀನ್ (19) ಎಂಬಾತನನ್ನು ಕುಂಬಳೆ ಪೊಲೀಸರು ಸೆರೆಹಿಡಿದಿದ್ದಾರೆ. 17 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.

ಬಂಧಿತ ಆರೋಪಿಗಳನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

SHARE
Loading spinner

One thought on “​ಕಾಸರಗೋಡು: ಲಾಡ್ಜ್‌ಗೆ ಕರೆದೊಯ್ದು ಕಿರುಕುಳ ಆರೋಪ; ಇಬ್ಬರು ಸೆರೆ”

  1. [1903]ll88 kjc লগইন ও অ্যাপ ডাউনলোড | বিকাশ অনলাইন ক্যাসিনো,ll88 kjc লগইন করে সেরা স্লট গেম সাইট উপভোগ করুন। বিকাশ দিয়ে অনলাইন ক্যাসিনো গেম খেলুন এবং সহজ নিয়মে অ্যাপ ডাউনলোড করে আজই শুরু করুন। visit: ll88 kjc

    Loading spinner

Leave a Reply

Your email address will not be published. Required fields are marked *

error: Content is protected !!