ಮಂಜೇಶ್ವರ (ಆಗಸ್ಟ್ 15): ಮಂಜೇಶ್ವರದ ಜಿ.ಎಚ್.ಎಸ್. ಉದ್ಯಾವರ ಶಾಲೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದೊಂದಿಗೆ ಆಚರಿಸಲಾಯಿತು. ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಶೀಬಾ ಬಿ. ಅವರು ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪಿ.ಟಿ.ಎ ಅಧ್ಯಕ್ಷ ಶ್ರೀ ರಹೀಂ ಪುಚ್ಚತ್ತಬೈಲ್ ಅವರು, “ಸ್ವಾತಂತ್ರ್ಯದ ಮಹತ್ವವನ್ನು ಪ್ರತಿಯೊಬ್ಬರೂ ಅರಿಯಬೇಕು. ದೇಶದ ಜವಾಬ್ದಾರಿಯುತ ಪ್ರಜೆಗಳಾಗಿ ರೂಪುಗೊಳ್ಳುವತ್ತ ವಿದ್ಯಾರ್ಥಿಗಳು ಮುನ್ನಡೆಯಬೇಕು” ಎಂದು ಕರೆ ನೀಡಿದರು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಜೇಶ್ವರ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಫಾತಿಮತ್ ಝೌರ ಅವರು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನಗಳನ್ನು ಸ್ಮರಿಸಿದರು. ಅಲ್ಲದೆ, “ದೇಶದ ಏಕತೆಯನ್ನು ಕಾಪಾಡಿಕೊಂಡು ರಾಷ್ಟ್ರದ ಪ್ರಗತಿಗೆ ಎಲ್ಲರೂ ಶ್ರಮಿಸಬೇಕು” ಎಂದು ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು. ಗೌರವ ಅತಿಥಿಯಾಗಿ ಆಗಮಿಸಿದ್ದ ನಿವೃತ್ತ ಪೊಲೀಸ್ ಉಪ ಅಧೀಕ್ಷಕರು ಹಾಗೂ ಶೈಕ್ಷಣಿಕ ತಜ್ಞ ಶ್ರೀ ಬಷೀರ್ ಅವರು, “ಶಿಸ್ತು, ದೇಶಭಕ್ತಿ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಯುವಜನತೆಯ ಪಾತ್ರ ಅತ್ಯಂತ ಪ್ರಮುಖವಾದದ್ದು” ಎಂದು ಸ್ಪೂರ್ತಿದಾಯಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಪಿ.ಟಿ.ಎ ಉಪಾಧ್ಯಕ್ಷ ಶ್ರೀ ಯಾಕೂಬ್ ಮಚ್ಚಂಪಾಡಿ, ಎಂ.ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ಶಶಿಕಲಾ, ಶ್ರೀ ಹಮೀದ್ ಚೌಕಿ ಹಾಗೂ ನೇತಾಜಿ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಶ್ರೀ ಯಶ್ಪಾಲ್ ಅವರು ಶುಭ ಹಾರೈಸಿದರು.


ಕಾರ್ಯಕ್ರಮದಲ್ಲಿ ಎಂ.ಪಿ.ಟಿ.ಎ ಉಪಾಧ್ಯಕ್ಷೆ ಶ್ರೀಮತಿ ದಯಾವತಿ, ಶ್ರೀ ಮೊಹಮ್ಮದ್ ಇರ್ಫಾನ್, ಶ್ರೀ ಅಬೂಬಕ್ಕರ್ ಸಿದ್ದಿಕ್ ಚೌಕಿ, ಶ್ರೀ ಝಕರಿಯಾ ಶಾಲಿಮಾರ್, ಮೇಘ್ ಕ್ಯಾಟರರ್ಸ್ ಮಾಲೀಕರಾದ ಶ್ರೀ ಹರೀಶ್, ಶ್ರೀ ನಾಯನಾರ್ ಅಹಮ್ಮದ್, ಶ್ರೀ ಉದಯ ಬಡಜ, ಶ್ರೀ ಖಲೀಲ್ ಜಾಮಲ್, ಶ್ರೀ ಅನ್ಸರ್ ಮಂಜೇಶ್ವರ,ಶ್ರೀ ತಮೀಮ್, ಶ್ರೀ ಅಬ್ದುಲ್ ಮಜೀದ್, ಮತ್ತು ಮಾಧ್ಯಮ ಮಿತ್ರರಾದ ಹನೀಫ್ ಶಾರ್ಜಾ, ವೈಎಂಸಿ ಕ್ಲಬ್ ಸದಸ್ಯರು ಸಹ ಭಾಗವಹಿಸಿದ್ದರು. ಉಪಸ್ಥಿತರಿದ್ದರು.
ಶ್ರೀ ಜಯರಾಜ ಎ.ಕೆ. ಸ್ವಾಗತಿಸಿ, ಶ್ರೀ ರಾಜೇಶ್ ಕುಮಾರ್ ಯು. ಅವರು ಧನ್ಯವಾದವಿತ್ತ ಈ ಕಾರ್ಯಕ್ರಮವನ್ನು ಶ್ರೀಮತಿ ಉಷಾ ದೇವಿ ಅವರು ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳನ್ನು ಹಾಡಿ, ಸ್ಪೂರ್ತಿದಾಯಕ ಭಾಷಣಗಳನ್ನು ಮಾಡಿದರು. ಕಾರ್ಯಕ್ರಮದ ಕೊನೆಯಲ್ಲಿ ಸಮಾರಂಭದಲ್ಲಿದ್ದ ಎಲ್ಲರಿಗೂ ಸಿಹಿ ವಿತರಿಸಲಾಯಿತು.


