ಮಂಜೇಶ್ವರದಲ್ಲಿ ವಿಜೃಂಭಣೆಯಿಂದ ಜರುಗಿದ ರೈತರ ದಿನಾಚರಣೆ

​ ಮಂಜೇಶ್ವರ : ಮಂಜೇಶ್ವರ ಗ್ರಾಮ ಪಂಚಾಯತ್ ಹಾಗೂ ಕೃಷಿ ಭವನದ ಜಂಟಿ ಆಶ್ರಯದಲ್ಲಿ ಸಿಂಹ ಮಾಸ 1ರ ಹೊಸ ವರ್ಷದ ಆರಂಭದ ದಿನದಂದು ಮಂಜೇಶ್ವರ ಬ್ಲಾಕ್ ಪಂಚಾಯತ್ ಹಾಲ್‌ನಲ್ಲಿ ‘ರೈತರ ದಿನಾಚರಣೆ’ಯು ಅತ್ಯಂತ ಸಂಭ್ರಮ ಮತ್ತು ಸಡಗರದಿಂದ ಜರುಗಿತು.

​ಹವಾಮಾನ ಬದಲಾವಣೆ ಹಾಗೂ ವಿವಿಧ ಬಿಕ್ಕಟ್ಟುಗಳ ನಡುವೆಯೂ ಮಣ್ಣಿನಲ್ಲಿ ಚಿನ್ನ ಬೆಳೆದು ನಾಡಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿರುವ ರೈತ ಬಂಧುಗಳನ್ನು ಗೌರವಿಸುವ ಹಾಗೂ ಕೃಷಿ ಪರಂಪರೆಯ ಬಗ್ಗೆ ಹೆಮ್ಮೆಪಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

​ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಗೌರವಾನ್ವಿತ ಶಾಸಕರಾದ ಶ್ರೀ ಎ.ಕೆ.ಎಂ. ಅಶ್ರಫ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
​ ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಬಶೀರ್ ಕನಿಲ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

​ ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷರಾದ ಶ್ರೀ ಯು.ಕೆ. ಸೈಫುಲ್ಲಾ ತಂಬಳ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಕೃಷಿಕರನ್ನು ಅಭಿನಂದಿಸಿದರು.
ಈ ಸಂದರ್ಭ ಬ್ಲಾಕ್ ಪಂಚಾಯತ್ ಅಭಿವೃದ್ದಿ ಸ್ಥಾಯೀ ಸಮಿತಿ ಅಧ್ಯಕ್ಷ ಮೊಹಮ್ಮದ್ ಹನೀಫ್ , ಪಂಚಾಯತ್ ಸದಸ್ಯ ಮುಕ್ತಾರ್ ಎ, ಉಪಾಧ್ಯಕ್ಷೆ ಫಾತಿಮತ್ ಝಹುರಾ, ಸೇರಿದಂತೆ ಹಲವರು ಉಪಸ್ಥಿತರಿದ್ದರು
​
ಬಳಿಕ ವೇದಿಕೆಯಲ್ಲಿ ಕೃಷಿ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿರುವ ಹಾಗೂ ವಿವಿಧ ವಿಭಾಗಗಳಲ್ಲಿ ಶ್ರಮಿಸಿರುವ ಸಾಧಕರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.

SHARE
Loading spinner

One thought on “ಮಂಜೇಶ್ವರದಲ್ಲಿ ವಿಜೃಂಭಣೆಯಿಂದ ಜರುಗಿದ ರೈತರ ದಿನಾಚರಣೆ”

  1. [5769]Arogantoto: Login Daftar Apk Slot Gacor Deposit Dana,Arogantoto menyediakan akses login mudah dan cara main baccarat online yang simpel. Nikmati situs casino live terpercaya dengan sistem deposit dana. Daftar sekarang! visit: arogantoto

    Loading spinner

Leave a Reply

Your email address will not be published. Required fields are marked *

error: Content is protected !!