ಕವಿ ಬರಹ

ಬರೆಯುವೆನು ಭರವಸೆಯ ಮೂಡಿಸುವ ಮಂತ್ರವ
ತೆರೆಸುವೆನು ಬೆಳವಣಿಗೆಯ ನವ ಬದುಕಿನ ಸೂತ್ರವ
ಕಲಿಸುವೆನು ಬಾಳ ಹಾದಿಯ ಏರುಪೇರುಗಳ ಗಾತ್ರವ
ಬೆಳೆಸುವೆನು ಮನದಿ ಸಾಮಾಜಿಕ ಕರ್ತವ್ಯದ ಪಾತ್ರವ

ಅಳಿಸುವೆನು ನಾನು ನನ್ನದೆoಬ ಪೊಳ್ಳು ಅಹಂಕಾರವ
ತಿಳಿಸುವೆನು ಬರಹದಲಿ ನಾವೆಂಬ ಒಗ್ಗಟ್ಟಿನ ಮೌಲ್ಯವ
ತೊಲಗಿಸುವೆನು ಅಸೂಯೆoಬ ನಂಜಿನ ಕೆಡು ಭಾವವ
ಅರಳಿಸುವೆನು ಜನಮನದಿ ಸ್ನೇಹಬಾಂಧವ್ಯದ ಪುಷ್ಪವ

ಸರಿಸುವೆನು ಮಸ್ತಕದಿ ತುಂಬಿದ ಕುಟಿಲ ಭೇದಭಾವವ
ಸುರಿಸುವೆನು ಮನುಜನ ಅಂತರಂಗದಿ ಪ್ರೀತಿ ಅಮೃತವ
ತೊರ್ಪಡಿಸುವೆನು ನಿಜ ಬದುಕಿನ ಸಾರ್ಥಕ ಜೀವನವ
ಪಸರಿಸುವೆನು ಜನಮಾನಸದಿ ಒಗ್ಗಟ್ಟಿನ ಸೌಹಾರ್ದವ

ಡಾ. ವಾಣಿಶ್ರೀ ಕಾಸರಗೋಡು
ಗಡಿನಾಡ ಕನ್ನಡತಿ

SHARE
Loading spinner

One thought on “ಕವಿ ಬರಹ

Leave a Reply

Your email address will not be published. Required fields are marked *

error: Content is protected !!