ಸರಸ್ವತಿ ಅನುಗ್ರಹದಿ ಬರೆಯುವರು ಪಂಡಿತರು
ಆದಿ ಪೂಜಿತ ದೇವ ಶ್ರೀ ಗಣಪನ ನೆನೆದು ಮನದಿ
ದೊರೆತ ಗಣೇಶ ಪ್ರಸಾದವ ಸ್ವೀಕರಿಸಿ ಮಾನವರು
ದಯೆಯಿಂದ ಪಡೆದ ಆನಂದದಿಂದಿರುವರು ಜಗದಿ

ಕಲಿತ ವಿದ್ಯೆಯ ತಿರುಳು ಎಷ್ಟಿದ್ದರೇನಂತೆ ಮಸ್ತಕದಿ
ಕಲೆತು ಸಮನಾಗಿ ಬಾಳುವ ಸ್ವಚ್ಛ ಮನವು ಇರದಿರೆ
ಪರರ ಕಾಲೆಳೆಯುತ್ತಾ ಕಾಲವ ಕಳೆದರೆ ಜೀವನದಿ
ಪಡೆದ ಜ್ಞಾನವು ಶ್ವಾನಕ್ಕಿಂತ ಹೀನವೆಂದು ಮರೆವರೆ

ಸಹಕವಿಗೆ ಸನ್ಮಾನಿಸಿದರೆ ಉರಿವರು ಮನದೊಳಗೆ
ಬರಿದೆ ಮೇಧಾವಿಯೆಂದು ಬೀಗುವರು ಜಗದೊಳಗೆ
ಪಾಂಡಿತ್ಯ ಕಷ್ಟ ಶ್ರದ್ಧೆ ಇದ್ದರದುವೆ ಸಾಲದು ಪ್ರಶಸ್ತಿಗೆ
ಅದೃಷ್ಟವೂ ಜೊತೆಗಿದ್ದರೆ ಬಂದೆರಗುವುದು ಮಡಿಲಿಗೆ

ಡಾ. ವಾಣಿಶ್ರೀ ಕಾಸರಗೋಡು
ಗಡಿನಾಡ ಕನ್ನಡತಿ


