ಏಳು ವರುಷಗಳ ಅನುಗ್ರಹದ ಪಯಣ: 2019ನೇ ಇಸವಿಯಲ್ಲಿ ಪ್ರಾರಂಭವಾದ ಸಂಚಾರಿ ಚಿಕ್ಕಮೇಳಕ್ಕೆ 7ರ ಸಂಭ್ರಮ

ಕಂಬಾರು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಹಾಗೂ ಜಟಾಧಾರಿದೈವದ ಅನುಗ್ರಹದೊಂದಿಗೆ 2019ನೇ ಇಸವಿಯಲ್ಲಿ ಪ್ರಾರಂಭವಾದ ಸಂಚಾರಿ ಚಿಕ್ಕಮೇಳವು 7 ವರುಷವನ್ನು ಪೂರೈಸಿದೆ.
ದೇವಸ್ಥಾನ ದಲ್ಲಿ ನಡೆದ ದೈವಚಿಂತನೆಯಲ್ಲಿ ದೇವರಿಗೆ ಗೆಜ್ಜೆಸೇವೆ ನಿರಂತರ ನಡೆಯುತ್ತಿರಬೇಕು ಎಂದು ಕಂಡುಬಂದ ಹಿನ್ನಲೆಯಲ್ಲಿ ಈ ಸಂಚಾರಿ ಚಿಕ್ಕಮೇಳವು ತಿರುಗಾಟ ಪ್ರಾರಂಭಿಸಿತ್ತು.

ಪತ್ತನಾಜೆ ಕಳೆದ ಬಳಿಕ ಮನೆ, ಮನೆಗೆ ಬಂದು ಯಕ್ಷಗಾನ ಸೇವೆಯನ್ನು ಮನೆಯ ಚಾವಡಿಯಲ್ಲಿ ನೀಡುವುದು ಕ್ರಮ. ಯಕ್ಷನಾದಂತರಂಗ ದಿಂದ ದುಷ್ಟ ಶಕ್ತಿಯು ನಾಶವಾಗುತ್ತದೆ ಎಂಬುದು ನಮ್ಮ ಹಿರಿಯರ ನಂಬಿಕೆ.
ಮನೆಗೆ ಬಂದಾಗ ಭಕ್ತಿಯಿಂದ ನೀಡುವ ಅಕ್ಕಿ,ತೆಂಗಿನಕಾಯಿ ದೇವಸ್ಥಾನದ ನಿತ್ಯ ಅನ್ನಧಾನಕ್ಕೆ ನೀಡುತ್ತಾ ಬಂದಿದ್ದಾರೆ.
ಅದೇಷ್ಟೊ ಮನೆಗಳಲ್ಲಿ ಲಗ್ನದ ಬಗ್ಗೆ, ಸಂತಾನದ ಬಗ್ಗೆ, ಕಷ್ಟ ಪರಿಹಾರದ ಬಗ್ಗೆ ಭಕ್ತಿಯಿಂದ ದೇವರಿಗೆ ಕಾರ್ತಿಕ ಪೂಜೆಯನ್ನು ನೀಡುತ್ತೇವೆ ಎಂದು ಪ್ರಾರ್ಥಿಸಿದ ಭಕ್ತರ ಮನೋರಥವನ್ನು ಈಡೇರಿದ್ದು ದೇವರ ಕಾರಣಿಕಕ್ಕೆ ಸಾಕ್ಷಿ.

ಈ ಚಿಕ್ಕಮೇಳವು ಶ್ರೀ ಕೃಷ್ಣ ರೈ ನೀರ್ಚಾಲು ಇವರ ಸಂಚಾಲಕತ್ವದಲ್ಲಿ ಮುನ್ನಡೆಯುತ್ತಿದೆ.
ತಂಡದ ಕಲಾವಿದರು : ಶ್ರೀ ಪ್ರಕಾಶ ವಿಟ್ಲ ಶ್ರೀ ಶಂಕರ ಕೊರಿಕ್ಕಾರ್, ಶ್ರೀ ಸುಕುಮಾರ ನೀರ್ಜೆಡ್ಡು, ಶ್ರೀ ಶಿವಾನಂದ ಪೆರ್ಲ,
ಸಹಕಾರ : ಶ್ರೀ ಸತ್ಯ ವೀರನಗರ ಅಡ್ಕ, ಶ್ರೀ ರಾಜೇಶ್ ಮುಗೇರ್, ತಿಲಕ್ ರಾಜ್ ವೀರನಗರ, ನವೀನ್ ರೈ ಕಾರಿಂಜ

SHARE
Loading spinner

One thought on “ಏಳು ವರುಷಗಳ ಅನುಗ್ರಹದ ಪಯಣ: 2019ನೇ ಇಸವಿಯಲ್ಲಿ ಪ್ರಾರಂಭವಾದ ಸಂಚಾರಿ ಚಿಕ್ಕಮೇಳಕ್ಕೆ 7ರ ಸಂಭ್ರಮ

Leave a Reply

Your email address will not be published. Required fields are marked *

error: Content is protected !!