ನದಿಗೆ ಬಿದ್ದ ಚೆಂಡು ತೆಗೆಯಲು ಹೋದ ಯುವಕ ನೀರಿನಲ್ಲಿ ಮುಳುಗಿ ಸಾವು

ನದಿಗೆ ಬಿದ್ದ ಚೆಂಡನ್ನು ಹೆಕ್ಕಲು ಹೋದ ವೇಳೆ ಯುವಕ ದಾರುಣವಾಗಿ ಸಾವನ್ನಪ್ಪಿದ ಘಟನೆ ಮಂಗಳೂರಲ್ಲಿ ನಡೆದಿದೆ. 25 ವರ್ಷದ ಮೊಹಮ್ಮದ್ ಸನಾವುಲ್ಲಾ, ಮೃತಪಟ್ಟ ಯುವಕ. ಕಸಬಾ ಬೆಂಗ್ರೆಯ ಫೆರಿ ಪಾಯಿಂಟ್ ಸಮೀಪ ನದಿಯ ಬಳಿ ಮಕ್ಕಳು ಫುಟ್ಬಾಲ್ ಆಡುತ್ತಿದ್ದ ಸಂದರ್ಭದಲ್ಲಿ ಚೆಂಡು ನದಿಗೆ ಬಿದ್ದಿದೆ. ಮಕ್ಕಳಿಗೆ ಸಹಾಯ ಮಾಡಲು ನದಿಗೆ ಇಳಿದು ಚೆಂಡನ್ನು ತೆಗೆಯಲು ಮುಂದಾದ ಸನಾವುಲ್ಲಾ ಅವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಸನಾವುಲ್ಲಾ ಅವರು ನೀರಿನಲ್ಲಿ ಮುಳುಗಿದ ವಿಚಾರ ಮಕ್ಕಳಿಂದ ಸ್ಥಳೀಯರಿಗೆ ತಕ್ಷಣ ತಿಳಿದು ಬಾರದ ಹಿನ್ನೆಲೆಯಲ್ಲಿ, ಬಳಿಕ ಹಲವು ಯುವಕರು ನದಿಗೆ ಧುಮುಕಿ ಅವರನ್ನು ಮೇಲಕ್ಕೆತ್ತಿ ಪ್ರಥಮ ಚಿಕಿತ್ಸೆ ನೀಡಿ ಹೈಲ್ಯಾಂಡ್ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮಕ್ಕಳಿಗೆ ಸಹಾಯ ಮಾಡಲು ಹೋದ ಯುವಕ ದಾರುಣವಾಗಿ ಸಾವನ್ನಪ್ಪಿದ್ದಾನೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!