ಮಂಜೇಶ್ವರ: ಸರಕಾರಿ ಪ್ರೌಢ ಶಾಲೆ ಮೂಡಂಬೈಲುನಲ್ಲಿ ಸಮುದಾಯದತ್ತ ಶಾಲೆ ಎಂಬ ಆಶಯದೊಂದಿಗೆ ದಿನಾಂಕ 23-08-2026 ನೇ ಆದಿತ್ಯವಾರದಂದು ಶಾಲಾ ಬೆಂಬಲ ಸಮಿತಿಯ ಭಾಗವಾಗಿ ಶಾಲಾ ಶುಚಿತ್ವ ಅಭಿಯಾನ ಭಾಗ – 1 ನಡೆಯಿತು.

ಈ ಅಭಿಯಾನದ ಉದ್ಘಾಟನೆಯನ್ನು ಮೀಂಜ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಉಷಾ ಪೂಂಜಾ ನೆರವೇರಿಸಿದರು.


ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಯುತ ಸಂಜೀವ ಎಂ, ಶಾಲಾ ರಕ್ಷಕ- ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಅಬ್ಬಾಸ್ ಪಮ್ಮರ್, ಉಪಾಧ್ಯಕ್ಷರಾದ ಶ್ರೀ ಶಶಿ ಕುಮಾರ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ರಾಮ್ ಪ್ರಕಾಶ್ ಆಳ್ವ, ಶತಮಾನೋತ್ಸವ ಸಮಿತಿ ಅಧ್ಯಕ್ಷ ಶ್ರೀ ಅಡ್ವ. ದಾಮೋದರ ಶೆಟ್ಟಿ, ಬಶೀರ್ ಮೂಡಂಬೈಲು, ಜಗದೀಶ್ ಮೂಡಂಬೈಲು, ರಮೇಶ್ ಸುವರ್ಣ, ಸಂಜೀವ ಪಜಿಂಗಾರ್, ಅಬ್ದುಲ್ ಕುಂಞಿ,ಯೋಗೀಶ್, ಆದರ್ಶ್,ಮಾತೃಮಂಡಳಿ ಅಧ್ಯಕ್ಷೆ ಶ್ರೀಮತಿ ಮಲ್ಲಿಕಾ,ಅನುಪಮ ನಾಯ್ಕ,ಶ್ರೀಲತಾ, ಝೌರ ಹಾಗೂ ಶಿಕ್ಷಕಿಯರಾದ ದಯಾವತಿ ಸಾಲ್ಯಾನ್, ಮೋಹಿನಿ, ಸುಷ್ಮಾ ಮತ್ತಿತರು ಈ ಅಭಿಯಾನದಲ್ಲಿ ಪಾಲ್ಗೊಂಡರು.

