ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಗೆ 2025-26 ನೇ ಸಾಲಿನ ಸಹಕಾರಿ ಬ್ಯಾಂಕಿನ ವಿಶಿಷ್ಟ ಸಾಧನ ಪ್ರಶಸ್ತಿ

ಮಂಗಳೂರು: ಹಳೆಯಂಗಡಿಯಲ್ಲಿ ಪ್ರಧಾನ ಕಚೇರಿ ಹೊಂದಿ, ಹಳೆಯಂಗಡಿ, ಪಡುಬಿದ್ರಿ, ಕಿನ್ನಿಗೋಳಿ, ಮೂಡಬಿದ್ರೆಯಲ್ಲಿ ಶಾಖೆ ಹೊಂದಿದ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ 20025-26 ನೇ ಸಾಲಿನ ಸಾಧನೆಯನ್ನು ಗುರುತಿಸಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತ ಮಂಗಳೂರು ಇವರು ಸರ್ವತೋಮುಖ ಅಭಿವೃದ್ಧಿಗಾಗಿ “ಸಾಧನಾ ಪ್ರಶಸ್ತಿ” ಯನ್ನು ಮಂಗಳೂರಿನ ಉತ್ಕೃಷ್ಟ ಸಹಕಾರಿ ಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೌರವಿಸಿ ನೀಡಿದರು.


ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಡಾ.ಎಂ ಎನ್ ರಾಜೇಂದ್ರ ಕುಮಾರ್ ರವರು ಈ ಪ್ರಶಸ್ತಿಯನ್ನು ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಎಚ್ ವಸಂತ್ ಬರ್ನಾಡ್ ರವರಿಗೆ ಪ್ರಧಾನ ಮಾಡಿದರು. ಇವರೊಂದಿಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಪೂಜಾರಿ ಜೊತೆಗಿದ್ದರು.

ಕಾರ್ಯಕ್ರಮದಲ್ಲಿ ಕೇಂದ್ರ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷರಾದ ವಿನಯಕುಮಾರ್ ಸೂರಿಂಜೆ, ನಿರ್ದೇಶಕರಾದ ಡಾ. ಬೆಳಪು ದೇವಿ ಪ್ರಸಾದ್ ಶೆಟ್ಟಿ, ಜಿಲ್ಲಾ ಯೂನಿಯನ್ ಸಹಕಾರಿ ಅಧ್ಯಕ್ಷರಾದ ಶಶಿಕುಮಾರ್ ರೈ ರವರು, ಸಹಕಾರಿ ಇಲಾಖೆಯ ಉಪನಿಬಂಧಕರಾದ ರಮೇಶ್ ಎನ್ ಮತ್ತು ಲಾವಣ್ಯ ಹಾಗೂ ಎಕ್ಕಾರು ಮೋನಪ್ಪ ಶೆಟ್ಟಿ, ಸದಾಶಿವ ಉಳ್ಳಾಲ್, ಭಾಸ್ಕರ್ ಕೋಟ್ಯಾನ್ ಇರುವತ್ತೂರು ಮೊದಲಾದವರು ಜೊತೆಗಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!