ಕಾಸರಗೋಡು: ಪಯ್ಯನ್ನೂರಿನ ಪೆರುಂಬಾದಲ್ಲಿ ಕಾರು ಡಿಕ್ಕಿಹೊಡೆದು ಪಾದಾಚಾರಿ ಯುವಕನೊಬ್ಬ ದಾರುಣವಾಗಿ ಸಾವನ್ನ ಸ್ವಿದ್ದಾನೆ.ಮಯಿಲ್ ನಿರತ್ತುಪಾಲಂ ನಿವಾಸಿ ಶಾಹಿದ್ (21) ಸಾವನ್ನಪ್ಪಿದ ದುರ್ದೈವಿ. ಅಪಘಾತದಲ್ಲಿ ಅವರೊಂದಿಗೆ ಇದ್ದ ತಿರುವಟ್ಟೂರು ನಿವಾಸಿ ಶಿಬಿಲ್ ಎಂಬುವವರಿಗೆ ಗಂಭೀರ ಗಾಯಗಳಾಗಿವೆ.

ಕಾಲ್ನಡಿಗೆಯಲ್ಲಿದ್ದ ಯುವಕರ ಮೇಲಿಗೆ ಕಾರು ಹರಿದು ಈ ಅಪಘಾತ ಸಂಭವಿಸಿದೆ.ಅಪಘಾತದ ಬಳಿಕ ನಿಲ್ಲಿಸದೆ ಪರಾರಿಯಾಗಿದ್ದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದು, ಅಪಘಾತಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ.


