ಚಾಮುಂಡಿಕುನ್ನುವಿನಲ್ಲಿ ಇಂದು ಓಣಂ ಆಚರಣೆ

ಕಾಸರಗೋಡು: ಚಾಮುಂಡಿಕುನ್ನುವಿನ ಶಿಲ್ಪಿ ಕಲಾ ಕಾಯಿಕ ಕೇಂದ್ರ ಹಾಗೂ ಬಾಲಸಂಘಂ ಚಾಮುಂಡಿಕುನ್ನು ಘಟಕದ ವತಿಯಿಂದ ಓಣಂ ಆಚರಣೆ 2026 ಇಂದು ಚಾಮುಂಡಿಕುನ್ನು ಪರಿಶ್ರಮ ಮಂದಿರ ಮೈದಾನದಲ್ಲಿ ನಡೆಯಲಿದೆ.

ಬೆಳಗ್ಗೆ 9.30ಕ್ಕೆ ಧ್ವಜಾರೋಹಣದೊಂದಿಗೆ ಕಾರ್ಯಕ್ರಮ ಆರಂಭವಾಗಲಿದ್ದು, ಬಳಿಕ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಲಿವೆ. ಮಧ್ಯಾಹ್ನ ಕ್ವಿಜ್, ಲಘು ಸಂಗೀತ, ಕವನ ವಾಚನ, ಸಿನೆಮಾ ಹಾಡು, ಕ್ರಾಂತಿಗೀತೆ ಹಾಗೂ ಮಾಪಿಳ ಹಾಡು ಸೇರಿದಂತೆ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿವೆ.

ಸಂಜೆ 7.30ಕ್ಕೆ ಸಾಂಸ್ಕೃತಿಕ ಸಮ್ಮೇಳನ ನಡೆಯಲಿದ್ದು, ವಿವಿಧ ಪರೀಕ್ಷೆಗಳಲ್ಲಿ ಉನ್ನತ ಸಾಧನೆ ಮಾಡಿದವರನ್ನು ಅಭಿನಂದಿಸಲಾಗುವುದು. ರಾತ್ರಿ 8.30ಕ್ಕೆ ‘ಕಲಾ ಸಂಜೆ’ ಕಾರ್ಯಕ್ರಮ ಆಯೋಜಿಸಲಾಗಿದೆ.

ಓಣಂ ಆಚರಣೆಯಲ್ಲಿ ಊರಿನ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಸಹಕಾರ ನೀಡುವಂತೆ ಶಿಲ್ಪಿ ಕಲಾ ಕಾಯಿಕ ಕೇಂದ್ರದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!