ಕಾಸರಗೋಡು: ಜೀವನದ ಹಸಿವಿಗೆಂದು ದೂರದ ರಾಜಸ್ಥಾನದಿಂದ ಬಂದ ಯುವಕನ ಬದುಕು ಕಾಸರಗೋಡಿನಲ್ಲಿ ನೀರುಪಾಲಾಗಿದೆ.

ಕಾಸರಗೋಡಿನ ಮೊಗ್ರಾಲ್ ಪುತ್ತೂರು ಸಮೀಪದ ಉಟ್ರೆಕೆರೆಯಲ್ಲಿ ಸಂಭವಿಸಿದೆ. ಜೈಪುರದ ಫರೀದ್ ಖಾನ್ ದಂಪತಿಯ ಮಗ ಅಲ್ ರೆಹದ್ ಫರ್ದೀನ್ ಖಾನ್ (23) ದುರ್ಮರಣಕ್ಕೀಡಾದ ಯುವಕ.

ಫ್ಲಾಟ್‌ನಲ್ಲಿ ವಾಸವಿದ್ದ ಈತ ಗೆಳೆಯರ ಜತೆ ಕೆರೆಗೆ ಇಳಿದಾಗ ಈ ದುರಂತ ನಡೆದಿದೆ. ಈಜು ಬಾರದೆ ನೀರಿನಲ್ಲಿ ಮುಳುಗುತ್ತಿದ್ದ ಯುವಕನನ್ನು ರಕ್ಷಿಸಲು ಅಗ್ನಿಶಾಮಕ ದಳ ಸಿಬ್ಬಂದಿ ಧಾವಿಸಿದರೂ ಫಲಕಾರಿಯಾಗಲಿಲ್ಲ.
ಆಸ್ಪತ್ರೆಗೆ ಕೊಂಡೊಯ್ಯುವಷ್ಟರಲ್ಲಿ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು. ಕಾಸರಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

