ಕಾಸರಗೋಡು : ಕೆಲಸ ಕೊಡಿಸುವ ನೆಪದಲ್ಲಿ ಕರ್ನಾಟಕದ 30 ವರ್ಷದ ಯುವತಿಯನ್ನು ನಂಬಿಸಿ ಅಂಬಲತ್ತರಕ್ಕೆ ಕರೆತಂದು ಲೈಂಗಿಕ ಶೋಷಣೆ ಎಸಗಿದ ಗಂಭೀರ ಆರೋಪ ಕೇಳಿಬಂದಿದೆ.

ಸಂತ್ರಸ್ತೆಯ ತಾಯಿಗೆ ಭರವಸೆ ನೀಡಿ ಕರೆತಂದ ಆರೋಪಿಗಳು, ಮೊದಲು ಅಂಬಲತ್ತರದ ವಸತಿಯೊಂದರಲ್ಲಿ ಆಕೆಗೆ ಕಿರುಕುಳ ನೀಡಿದ್ದಾರೆ. ನಂತರ ಮನೆಗೆಲಸದ ನೆಪದಲ್ಲಿ ಮತ್ತೊಬ್ಬನಿಗೆ ಹಸ್ತಾಂತರಿಸಿದ್ದು, ಅಲ್ಲೂ ದೌರ್ಜನ್ಯವೆಸಗಿದ್ದಾರೆ.

ನೊಂದ ಯುವತಿ ನೀಡಿದ ದೂರಿನನ್ವಯ ಅಂಬಲತ್ತರ ಠಾಣೆಯ ಆರಕ್ಷಕರು ಇರಿಯ ನಿವಾಸಿ ಬಶೀರ್ ಹಾಗೂ ಪಳ್ಳಿಕೆರೆಯ ಆಶಿಕ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಶೋಧ ಕಾರ್ಯ ಚುರುಕುಗೊಳಿಸಿದ್ದಾರೆ

