ವಾಮಂಜೂರು ತಪಾಸಣಾ ಕೇಂದ್ರದ ಬಳಿ ಭೀಕರ ಅಪಘಾತ ಪ್ರಕರಣ: ಯುವಕ ಸಾವು

ಮಂಜೇಶ್ವರ : ರಾಷ್ಟ್ರೀಯ ಹೆದ್ದಾರಿಯ ವಾಮಂಜೂರು ತಪಾಸಣಾ ಕೇಂದ್ರದ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸ್ಕೂಟರ್ ಸವಾರನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ.
ಬೆಳ್ತಂಗಡಿ ಮೂಲದ, ಮಂಗಳೂರಿನ ಕೆಫೆಯೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಾತಿಷ (25) ಸಾವನ್ನಪ್ಪಿದ ದುರ್ದೈವಿ.

​ ಮಂಗಳವಾರ ಮುಂಜಾನೆ ಮೂರು ಗಂಟೆಯ ಸುಮಾರಿಗೆ ಕಾಸರಗೋಡಿನಿಂದ ಮಂಗಳೂರಿನತ್ತ ಪ್ರಯಾಣಿಸುತ್ತಿದ್ದಾಗ ವಾಹನವು ಚಾಲಕನ ನಿಯಂತ್ರಣ ತಪ್ಪಿ ವಿಭಜಕಕ್ಕೆ ಬಲವಾಗಿ ಅಪ್ಪಳಿಸಿದೆ.ಪರಿಣಾಮವಾಗಿ ಗಂಭೀರವಾಗಿ ಗಾಯಗೊಂಡ ಬಾತಿಷರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಫಲಕಾರಿಯಾಗಲಿಲ್ಲ.

ಅದೃಷ್ಟವಶಾತ್, ವಾಹನದಲ್ಲಿದ್ದ ಸಹಪ್ರಯಾಣಿಕ ಸಣ್ಣಪುಟ್ಟ ಗಾಯಗಳೊಂದಿಗೆ ಬದುಕಿುಳಿದಿದ್ದಾನೆ. ಕೃತ್ಯಕ್ಕೆ ಸಂಬಂಧಿಸಿದಂತೆ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

SHARE
Loading spinner

One thought on “ವಾಮಂಜೂರು ತಪಾಸಣಾ ಕೇಂದ್ರದ ಬಳಿ ಭೀಕರ ಅಪಘಾತ ಪ್ರಕರಣ: ಯುವಕ ಸಾವು

Leave a Reply

Your email address will not be published. Required fields are marked *

error: Content is protected !!