355 ನೇ ಶ್ರೀ ರಾಘವೇಂದ್ರ ಸ್ವಾಮಿ ಆರಾಧನಾ ಮಹೋತ್ಸವ

ಕಾಸರಗೋಡು ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದ ಸಮೀಪವಿರುವ ಶ್ರೀ ಗುರು ರಾಘವೇಂದ್ರ ಸ್ವಾಮಿ ಸನ್ನಿಧಿಯಲ್ಲಿ ಸಂಪೂಜ್ಯ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ 355ನೇ ಆರಾಧನಾ ಮಹೋತ್ಸವವು ಕ್ಷೇತ್ರದ ಮೊಕ್ತೇಸರರೂ, ತಂತ್ರವರ್ಯರೂ ಆದ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರ ಅವರ ನಿರ್ದೇಶನ ಹಾಗೂ ಉಪಸ್ಥಿತಿಯಲ್ಲಿ ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ ಗಣಪತಿ ಹವನ, ಪಂಚಾಮೃತ ಅಭಿಷೇಕ, ಪಾದ ಪೂಜೆ, ರಂಗ ಪೂಜೆಯೊಂದಿಗೆ ವಿಜೃಂಭಣೆಯಿಂದ ಸಂಪನ್ನಗೊಂಡಿತು.

ವ್ಯಾಸಮಂಟಪದಲ್ಲಿ ಪದ್ಮಪ್ರಿಯ ಭಜನಾ ಸಂಘದವರಿಂದ ಭಜನೆ, ಕೀರ್ತಿಶೇಷ ಮಧೂರು ಪದ್ಮನಾಭ ಸರಳಾಯ ಶಿಷ್ಯ ವೃಂದದಿಂದ ವಿದ್ವಾನ್ ಶ್ರೀ ಪಿ. ಪುರುಷೋತ್ತಮ ಪುಣಿಚಿತ್ತಾಯ ಇವರ ನೇತೃತ್ವದಲ್ಲಿ ವಿದ್ವಾನ್ ಬಳ್ಳಾರಿ ಸುಮುಂತ್ ಗುರುರಾಜ್ ಚೆನೈ ಇವರಿಂದ ಸಂಗೀತ ಕಚೇರಿ, ಉಳಿಯ ಶ್ರೀ ಧನ್ವಂತರಿ ಯಕ್ಷಗಾನ ಸಂಘದವರಿಂದ ತಾಳಮದ್ದಳೆ ಸಂಜೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಜರಗಿತು.

ಈ ಎಲ್ಲಾ ಕಾರ್ಯಕ್ರಮದಲ್ಲಿ ಕ್ಷೇತ್ರ ಸಮಿತಿಯ ಪ್ರಮುಖರಾದ ಡಾl ಕೆ.ಎನ್. ವೆಂಕಟ್ರಮಣ ಹೊಳ್ಳ ನಗರಸಭಾ ಸದಸ್ಯ ಕೆ. ಎನ್. ರಾಮಕೃಷ್ಣ ಹೊಳ್ಳ, ಶ್ರೀ ಕೆ.ವಿ. ಶ್ರೀನಿವಾಸ ಹೊಳ್ಳ, ಕಿಶೋರ್ ಕುಮಾರ್ ಎಸ್.ವಿ.ಟಿ, ಕೆ.ವಿ ಶೇಷಾದ್ರಿ ಹೊಳ್ಳ, ವಸಂತ ಕೆರೆಮನೆ, ನಾಮದೇವ, ಪುರಂದರ ಶೆಟ್ಟಿ, ಸಾಯಿನಾಥ್ ರಾವ್, ಕಿಶೋರ್ ಬಿಪಿ, ಶಂಕರ ನಾರಾಯಣ ಹೊಳ್ಳ, ರವಿ ಕೇಸರಿ, ಪ್ರಮೋದ್ ಎಸ್.ವಿ.ಟಿ, ಮೋಹನ ಕೊರಕೋಡು, ನವಿನ್ ಅಶೋಕ್ ನಗರ, ರಾಮಕೃಷ್ಣ ರಾವ್, ಶ್ರೀಲತಾ ಟೀಚರ್ ಹಾಗೂ ಮಾತೃ ಸಮಿತಿಯ ಪದಾಧಿಕಾರಿಗಳು ಸದಸ್ಯರು, ವೆಂಕಟ್ರಮಣ ಬಾಲ ಗೋಕುಲದ ಮಕ್ಕಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!