ರಾಮಕ್ಷತ್ರಿಯ ಸಮಾಜದ ರಾಜ್ಯಮಟ್ಟದ ವೃತ್ತಿಪರರ ಸಮಾವೇಶ; ಪೂರ್ವಭಾವಿ ಸಭೆ ಸೆ.6ರಂದು

ಕುಂದಾಪುರದ ವಿಶ್ವ ರಾಮಕ್ಷತ್ರಿಯ ಮಹಾಸಂಘದ ಆಶ್ರಯದಲ್ಲಿ ರಾಮಕ್ಷತ್ರಿಯ ಸಮಾಜದ ರಾಜ್ಯಮಟ್ಟದ ವೃತ್ತಿಪರರ ಸಮಾವೇಶವನ್ನು ಡಿಸೆಂಬರ್ 20ರಂದು ಉಡುಪಿ ಜಿಲ್ಲೆಯ ಬ್ರಹ್ಮಾವರದ ದೇವಕಿ ಕೃಷ್ಣ ಕಂಫರೆನ್ಸ್ ಹಾಲ್‌ನಲ್ಲಿ ಆಯೋಜಿಸಲಾಗಿದೆ.

ಈ ಸಮಾವೇಶದಲ್ಲಿ ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ವೃತ್ತಿಪರರು ಭಾಗವಹಿಸುವ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆಯನ್ನು ಸೆಪ್ಟೆಂಬರ್ 6ರಂದು ಸಂಜೆ 5 ಗಂಟೆಗೆ ಹೊನ್ನಾವರದ ಶ್ರೀ ಲಕ್ಷ್ಮೀನಾರಾಯಣ ಸಭಾಭವನದಲ್ಲಿ ಆಯೋಜಿಸಲಾಗಿದೆ.

ಸಭೆಗೆ ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ವೃತ್ತಿಪರರು ಸಕಾಲದಲ್ಲಿ ಆಗಮಿಸಿ ಸಭೆಯನ್ನು ಯಶಸ್ವಿಗೊಳಿಸುವಂತೆ ವಿಶ್ವ ರಾಮಕ್ಷತ್ರಿಯ ಸಂಘದ ಉತ್ತರ ಕನ್ನಡ ಜಿಲ್ಲೆಯ ಸದಸ್ಯರು ಮನವಿ ಮಾಡಿದ್ದಾರೆ.

SHARE
Loading spinner

One thought on “ರಾಮಕ್ಷತ್ರಿಯ ಸಮಾಜದ ರಾಜ್ಯಮಟ್ಟದ ವೃತ್ತಿಪರರ ಸಮಾವೇಶ; ಪೂರ್ವಭಾವಿ ಸಭೆ ಸೆ.6ರಂದು

Leave a Reply

Your email address will not be published. Required fields are marked *

error: Content is protected !!