ಕಾಸರಗೋಡು: ನಕಲಿ ಚಿನ್ನಾಭರಣಗಳನ್ನು ಅಡವಿಟ್ಟು ಬರೋಬ್ಬರಿ 11,44,000 ರೂಪಾಯಿ ಸಾಲ ಪಡೆದು ವಂಚಿಸಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ. ಪೊಯಿನಾಚಿಯ ಅಬ್ದುಲ್ ಮಜೀದ್ (52) ಎಂಬಾತನ ವಿರುದ್ಧ ಕಾಸರಗೋಡು ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಆರೋಪಿಯು ಒಳಗೆ ಅರಗು ತುಂಬಿ ಮೇಲೆ ಚಿನ್ನದ ಲೇಪನ ಮಾಡಿದ್ದ 108.40 ಗ್ರಾಂ ತೂಕದ ಬಳೆ ಹಾಗೂ ನೆಕ್ಲೇಸ್ ಅಡವಿಟ್ಟು ಹಣ ಪಡೆದಿದ್ದನು. ಮಣಪ್ಪುರಂ ಫೈನಾನ್ಸ್ ಶಾಖಾ ವ್ಯವಸ್ಥಾಪಕ ಕಿರಣ್ ಕುಮಾರ್ ನೀಡಿದ ದೂರಿನನ್ವಯ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.


