ಕಾಸರಗೋಡು : ಮನೆ ಕೆಲಸ ಕೊಡುಸುವುದಾಗಿ ನಂಬಿಸಿ ಕರ್ನಾಟಕ ಮೂಲದ ಯುವತಿಯ ಮೇಲೆ ಲೈಂಗಿಕ ಶೋಷಣೆ ಎಸಗಿದ ಆರೋಪದಲ್ಲಿ ಇರಿಯಾ ನಿವಾಸಿ ಪಾರಮ್ಮಲ್ ಬಶೀರ್ (56) ಎಂಬಾತನನ್ನು ರಾಜಪುರ ಪೊಲೀಸರು ಬಂಧಿಸಿದ್ದಾರೆ.

ಸಂತ್ರಸ್ತೆಯ ತಾಯಿಗೆ ಭರವಸೆ ನೀಡಿ ಯುವತಿಯನ್ನು ಅಂಬಲತರಕ್ಕೆ ಕರೆಸಿಕೊಂಡಿದ್ದ ಬಶೀರ್, ಆಕೆಗೆ ವಸತಿ ವ್ಯವಸ್ಥೆ ಕಲ್ಪಿಸಿ ಕಳೆದ ಜನವರಿ ಮತ್ತು ಮಾರ್ಚ್ ಅವಧಿಯಲ್ಲಿ ಲೈಂಗಿಕ ಕಿರುಕುಳ ನೀಡಿದ್ದ. ತದನಂತರ ಆಕೆಯನ್ನು ಪಳ್ಳಿಕೆರೆ ನಿವಾಸಿಯೊಬ್ಬನಿಗೆ ಹಸ್ತಾಂತರಿಸಿದ್ದು, ಆತನೂ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.

ಇನ್ಸ್‌ಪೆಕ್ಟರ್ ಎ. ಸಂತೋಷ್ ಕುಮಾರ್ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಪಳ್ಳಿಕೆರೆ ನಿವಾಸಿಯ ಪತ್ತೆಗೆ ಜಾಲ ಬೀಸಿದೆ.


Top notch service and the graphics are amazing. I feel like I have a much better chance of winning here. Check out boga88login for sure.