ಕಾಸರಗೋಡು: ಪ್ರಾಣ ಕೈಯಲ್ಲಿ ಹಿಡಿದುಕೊಂಡು ಓಡಾಟ: ಗ್ರಾಮಸ್ಥರ ನಿತ್ಯದ ಸಂಕಷ್ಟ

ಕಾಸರಗೋಡು: ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು ಸಂಚರಿಸುವುದು ಎಂದರೆ ಏನು ಎಂಬುದಕ್ಕೆ ಮಲ್ಲಾವರ, ಕುಂಡಲ ಹಾಗೂ ನಾಮಂಗಾಲ ಭಾಗದ ಜನರ ನಿತ್ಯದ ಪ್ರಯಾಸವೇ ಸಾಕ್ಷಿ.

ಇಲ್ಲಿನ ನೂರಾರು ಗ್ರಾಮಸ್ಥರು ಶಾಲೆ, ಪಡಿತರ ಚೀಟಿ ಅಂಗಡಿ, ಪೊಲೀಸ್ ಠಾಣೆ ಸೇರಿದಂತೆ ದಿನನಿತ್ಯದ ಅಗತ್ಯಗಳಿಗಾಗಿ ಆದೂರು ಪೇಟೆ ತಲುಪಲು ‘ಕಲ್ಲಕಟ್ಟ’ ಹಳ್ಳದ ಬದಿಯ ಕಿರಿದಾದ ಕಾಲುದಾರಿಯನ್ನೇ ನೆಚ್ಚಿಕೊಳ್ಳಬೇಕಾಗಿದೆ.

​ಕಾರಡ್ಕ ಪಂಚಾಯತಿಯ 6ನೇ ವಾರ್ಡ್‌ಗೆ ಒಳಪಡುವ ಈ ಅಪಾಯಕಾರಿ ಹಾದಿಯ ಎರಡೂ ಬದಿಗಳು ಕುಸಿದು ಬಿದ್ದಿದ್ದು, ಪ್ರಪಾತದಂತಾಗಿದೆ.

ತಾತ್ಕಾಲಿಕ ಪರಿಹಾರವಾಗಿ ಅಡಿಕೆ ಮರದ ದಿಮ್ಮಿಗಳನ್ನು ಜೋಡಿಸಲಾಗಿದೆಯಾದರೂ, ಸಣ್ಣ ಆಯತಪ್ಪುವಿಕೆ ಕೂಡ ಭೀಕರ ದುರಂತಕ್ಕೆ ಆಹ್ವಾನ ನೀಡುತ್ತಿದೆ. ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಭಯಪಡುವ ವಾತಾವರಣ ಇಲ್ಲಿದೆ.

ಜವಾಬ್ದಾರಿಯುತ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಂಡು ಈ ರಸ್ತೆಗೆ ಶಾಶ್ವತ ತಡೆಗೋಡೆ ಮತ್ತು ಸಂಚಾರ ವ್ಯವಸ್ಥೆ ಕಲ್ಪಿಸಬೇಕೆಂದು ಪೀಡಿತ ಗ್ರಾಮಸ್ಥರು ತೀವ್ರವಾಗಿ ಒತ್ತಾಯಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!