ಮಂಗಳೂರಿನಲ್ಲಿ ಮಕ್ಕಳ ಕೈಯಲ್ಲಿ ಅರಳಿದ ಮಣ್ಣಿನ ಗಣಪತಿ

ಮಂಗಳೂರು: ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮಂಗಳೂರು, ಕೆನರಾ ಬ್ಯಾಂಕ್, ನವ ಮಂಗಳೂರು ಬಂದರು, ಮಂಗಳೂರು ಎಜೆ ಆಸ್ಪತ್ರೆ, ಕ್ಯಾಂಪ್ಕೋ, ಸೈಕಲ್ ಅಗರಬತ್ತಿ ಹಾಗೂ ಇನ್ನರ್ ವ್ಹೀಲ್ ಕ್ಲಬ್ ಆಫ್ ಮಂಗಳೂರು ನಾರ್ಥ್ ಮತ್ತು ನಾರಿ ಕ್ಲಬ್ ಹಾಗೂ ಸಾರಿ ವಾಕ್ ಅಂಡ್ ರನ್ ಆಶ್ರಯದಲ್ಲಿ ಇಲ್ಲಿನ ರೋಟರಿ ಬಾಲ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಪರಸರ ಸ್ನೇಹಿ ಮಣ್ಣಿನ ಗಣಪತಿ ತಯಾರಿಕಾ ಕಾರ್ಯಾಗಾರವು ನಡೆಯಿತು.

ಪರಿಸರ ಕಾಳಜಿಯಿಂದ ಪಿಒಪಿ ಹಾಗೂ ರಾಸಾಯನಿಕ ಬಣ್ಣಗಳಿಂದ ಕೂಡಿದ ಗಣಪತಿ ಮೂರ್ತಿಗಳ ತಯಾರಿಕೆ ಮತ್ತು ಬಳಕೆಗೆ ನಿರ್ಬಂಧ ಹೇರಲಾಗುತ್ತಿರುವ ಬೆನ್ನಲ್ಲೇ, ಸಾರ್ವಜನಿಕರಲ್ಲಿ ಪರಿಸರದ ಬಗ್ಗೆ ಕಾಳಜಿ ಮೂಡಿಸುವ ಉದ್ದೇಶದಿಂದ ಪರಿಸರ ಸ್ನೇಹಿ ಮಣ್ಣಿನ ಗಣಪತಿ ಮೂರ್ತಿ ತಯಾರಿಕೆ ಕಾರ್ಯಾಗಾರ ಆಯೋಜನೆ ಮಾಡಲಾಗಿತ್ತು.

ನಾರಿ ಕ್ಲಬ್ ಹಾಗೂ ಸಾರಿ ವಾಕ್ ಅಂಡ್ ರನ್ 4 ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಪರಿಸರ ಸ್ನೇಹಿ ಮಣ್ಣಿನ ಗಣಪತಿ ಮೂರ್ತಿ ತಯಾರಿಕೆ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಕಾರ್ಯಾಗಾರದಲ್ಲಿ ಮಕ್ಕಳು ಸಾಮೂಹಿಕವಾಗಿ ಮಣ್ಣಿನ ಗಣಪತಿ ಮೂರ್ತಿಗಳನ್ನು ತಯಾರಿಸಿದರು.

ಕಾರ್ಯಾಗಾರಕ್ಕೆ 125 ಮಕ್ಕಳು ಹೆಸರು ನೋಂದಣಿ ಮಾಡಿಕೊಂಡಿದ್ದರು. ಮಕ್ಕಳಿಗೆ ಪರಿಸರ ಸ್ನೇಹಿ ಗಣಪತಿ ಮೂರ್ತಿ ತಯಾರಿಸುವ ಕೌಶಲ ಬೆಳೆಸುವುದರ ಜತೆಗೆ ಪರಿಸರ ಸಂರಕ್ಷಣೆ ಹಾಗೂ ದೈವಿಕ ಭಾವನೆ ಮೂಡಿಸುವ ಸಲುವಾಗಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.

1000 ಕೆ.ಜಿ. ಮಣ್ಣಿನ ಬಳಕೆ

1 ಸಾವಿರ ಕೆ.ಜಿ.ಗೂ ಅಧಿಕ ಮಣ್ಣಅನ್ನು ಮೂರ್ತಿ ತಯಾರಿಕೆಗೆ ಬಳಸಲಾಯಿತು.ಪರಿಸರ ಸ್ನೇಹಿಯಾಗಿ ಮಕ್ಕಳು ತಾವೇ ಗಣಪತಿ ಮೂರ್ತಿ ತಯಾರಿಸುವುದರಿಂದ ಅವರಲ್ಲಿ ಸೃಜನಶೀಲತೆ ಹಾಗೂ ಕೌಶಲ ಬೆಳೆಸುವ ಉದ್ದೇಶವನ್ನು ಆಯೋಜಕರು ಹೊಂದಿದ್ದಾರೆ.

ಪೋಷಕರೂ ಮಕ್ಕಳ ಜತೆಗೆ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.ಪುಟ್ಟ ಮಕ್ಕಳು ಮೈ-ಕೈಗಳಿಗೆ ಮಣ್ಣು ಮೆತ್ತಿಸಿಕೊಂಡು ಗಣಪತಿ ಮೂರ್ತಿ ತಯಾರಿಕೆಯಲ್ಲಿ ಉತ್ಸಾಹದಿಂದ ತೊಡಗಿಸಿಕೊಂಡ ದೃಶ್ಯ ನೋಡುಗರ ಗಮನ ಸೆಳೆಯಿತು.

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ಡಾ. ಮಂಜು ರಾಜಣ್ಣ ಅವರು ಕಾರ್ಯಾಗಾರವನ್ನುಉದ್ಘಾಟಿಸಿ ಮಾತನಾಡಿ, ಗಣೇಶ ಹಬ್ಬದ ಅಂಗವಾಗಿ ಇಲಾಖೆ ಪರಿಸರ ಸ್ನೇಹಿಯಾಗಿ ಹಬ್ಬ ಆಚರಣೆಗೆ ಎಲ್ಲ ಕಡೆಗಳಲ್ಲಿ ಜಾಗೃತಿಗೆ ಮುಂದಾಗಿದ್ದು, ಪಿಒಪಿ ಬಳಕೆಯ ಗಣೇಶ ಮೂರ್ತಿಗಳನ್ನು ನಿಷೇಧ ಹಾಕಿದ್ದು, ಮಣ್ಣಿನಿಂದಲೇ ಮಾಡಿದ ಮೂರ್ತಿಗಳನ್ನು ಮನೆಯಲ್ಲಿ ಪೂಜೆ ಮಾಡಿ. ಇಲಾಖೆ ಸೂಚಿಸಿರುವ ಕಲ್ಯಾಣಿಗಳಲ್ಲಿಯೇ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಿ, ಪರಿಸರಕ್ಕೆ ಹಾನಿ ಆಗುವಂತಹ ರೀತಿಯಲ್ಲಿ ಮೂರ್ತಿ ವಿಸರ್ಜನೆ ಮಾಡಬೇಡಿ. ಮೂರ್ತಿ ಅಲಂಕಾರಕ್ಕೆ ಬಳಕೆ ಮಾಡುವ ವಸ್ತುಗಳನ್ನು ಸರಿಯಾಗಿ ಸಂಗ್ರಹ ಮಾಡಿ ವಿಲೇವಾರಿ ಮಾಡಬೇಕು. ಎಲ್ಲರೂ ಪರಿಸರ ಸ್ನೇಹಿ ಗಣೇಶನ ಮೂರ್ತಿಗಳನ್ನೇ ಬಳಸುವಂತೆ ಮನವಿ ಮಾಡಿದರು.

ಮಕ್ಕಳಲ್ಲಿ ಪರಸರ ಸ್ನೇಹಿ ಮನೋಭಾವನೆಯನ್ನು ಮೂಡಿಸುವ ಉದ್ದೇಶದಿಂದ ನಾರಿ ಕ್ಲಬ್ ಹಾಗೂ ಸಾರಿ ವಾಕ್ ಅಂಡ್ ರನ್ ವಿವಿಧ ಆಯೋಜಕರ ಆಶ್ರಯದಲ್ಲಿ ಮಣ್ಣಿನ ಗಣಪತಿ ಮೂರ್ತಿಗಳನ್ನು ತಯಾರಿಸುವ ಕಾರ್ಯಾಗಾರವನ್ನು ನಡೆಸಿಕೊಂಡು ಬರುತ್ತಿದ್ದು, ಇಂತಹ ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಿಕಾ ಕಾರ್ಯಾಗಾರವನ್ನು ಆಯೋಜನೆ ಮಾಡಲಾಗುತ್ತದೆ ಎಂದು ರಾಜೇಶ್ ಆರ್ ಅವರು ಹೇಳಿದರು.

ಸೈಕಲ್ ಅಗರಬತ್ತಿ ಕಂಪನಿಯ ಮಾರುಕಟ್ಟೆ ವಿಭಾಗದ ಗುರುರಾಜ್, ಇನ್ನರ್ ವ್ಹೀಲ್ ಕ್ಲಬ್ ನ ಜಿಲ್ಲಾ ಗೌರ್ನರ್ ರಜನಿ ಭಟ್, ಇನ್ನರ್ ವ್ಹೀಲ್ ಕ್ಲಬ್ ಆಫ್ ಮಂಗಳೂರು ನಾರ್ಥ ಅಧ್ಯಕ್ಷೆ ಕವಿತಾ ಕಾಮತ್, ಬಿಜೈ ರಿಲಯನ್ಸ್ ಸ್ಮಾರ್ಟ್ ಬಜಾರ್ ನ ಮುಖ್ಯಸ್ಥ ಸಂದೇಶ್, ಶಿವಸ್ವಾಮಿ, ಪ್ರಶಾಂತ್ ಭಟ್ ಹಾಗೂ ಸಿಬ್ಬಂದಿ ಇದ್ದರು.ಗಣೇಶ ಮೂರ್ತಿ ಕಾರ್ಯಾಗಾರವನ್ನು ಕಿರಣ್ ಕಾಸರಗೋಡ ಅವರು ನಡೆಸಿಕೊಟ್ಟರು. ಕಾರ್ಯಕ್ರಮವನ್ನು ಸ್ವಾತಿ ಎನ್ ಶೆಣೈ ನಿರೂಪಿಸಿದರು.

SHARE
Loading spinner

2 thoughts on “ಮಂಗಳೂರಿನಲ್ಲಿ ಮಕ್ಕಳ ಕೈಯಲ್ಲಿ ಅರಳಿದ ಮಣ್ಣಿನ ಗಣಪತಿ

  1. Finally found a site that doesn’t lag during peak hours. The game selection is solid and the bonuses actually feel fair. Great spot for some weekend fun! ph777ny

    Loading spinner

Leave a Reply

Your email address will not be published. Required fields are marked *

error: Content is protected !!