ಪರಸ್ಪರ ಸಹಕಾರದ ಮೂಲಕ ಅಭಿವೃದ್ಧಿ ಸಾಧ್ಯವೆಂದು, ಕೇಂದ್ರ ಸರಕಾರ ಜಾರಿಗೊಳಿಸುತ್ತಿರುವ ‘ಸಹಕಾರ್ ಸೆ ಸಮೃದ್ಧಿ’ ಎಂಬ
ಘೋಷಣೆಯೊಂದಿಗೆ ಜೀವನ್ ಜ್ಯೋತಿ ಮಲ್ಟಿ ಸ್ಟೇಟ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಕಾರ್ಯವೆಸಗುತ್ತಿರುವುದು ಶ್ಲಾಘನೀಯ, ಎಂದು ಕಾಸರಗೋಡು ಬಾಲಭವನ ಇಂಗ್ಲಿಷ್ ಮಾಧ್ಯಮ ಶಾಲೆಯ ಮುಖ್ಯಸ್ಥರಾದ ಶ್ರೀಮತಿ ಲೀಲಾವತಿ ಕೆ ನಾಯರ್ ಅಭಿಪ್ರಾಯಪಟ್ಟರು.


ಜೀವನ್ ಜ್ಯೋತಿ ಸೊಸೈಟಿಯ ಕಾಸರಗೋಡು ಶಾಖೆಯ ಪ್ರಥಮ ವಾರ್ಷಿಕೋತ್ಸವ ಹಾಗೂ ಓಣಂ ಹಬ್ಬದ ಸಂಭ್ರಮನ್ನು ದೀಪ ಬೆಳಗಿಸಿ ಅವರು ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ವಾರ್ಡ್ ಸದಸ್ಯೆ ಶೀಮತಿ ಶಮಿನ ಮುಜೀಬ್ ವಹಿಸಿದರು. ಬಾಲುಮಹೇಂದ್ರ ಮುಖ್ಯೋ ಪಾಧ್ಯಾಯರು ಪ್ರಾಸ್ತಾವಿಕ ಮಾತುಗಳಲ್ಲಿ ಸೊಸೈಟಿಯ ಬಗ್ಗೆ ತಿಳಿಸಿದರು.



ಮುಖ್ಯ ಅತಿಥಿಗಳಾಗಿ ಜೀವನ್ ಜ್ಯೋತಿ ಮಂಗಳೂರು ಶಾಖೆಯ ಮೆನೇಜರ್ ಶ್ರೀಮತಿ ಆಶ್ರಿತ ಶೆಟ್ಟಿ, ತುಳು ವರ್ಲ್ಡ್ ಫೌಂಡೇಶನ್ ನಿರ್ದೇಶಕರಾದ ಡಾ ರಾಜೇಶ್ ಕೃಷ್ಣ ಆಳ್ವ ಮೊದಲಾದವರು ಭಾಗವಹಿಸಿ ಶುಭ ಹಾರೈಸಿದರು. ಜೀವನ್ ಜ್ಯೋತಿ ಸೊಸೈಟಿಯ ಗ್ರಾಹಕರಾದ ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ಆಯ್ಕೆಯಾದ ಕೌನ್ಸಿಲರ್ ಹರೀಶ ಕೆ ಆರ್, ಕುಂಬಳೆ ಗ್ರಾಮ ಪಂಚಾಯತ್ ಸದಸ್ಯರಾದ ರಮೇಶ್ ಭಟ್, ಅಜಿತ್ ಕುಮಾರ್ ಕಾಂಚಾರ ಮೊದಲಾದವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.


ಸೊಸೈಟಿಯಲ್ಲಿ ವ್ಯವಹಾರ ನಡೆಸಿ ಉತ್ತಮ ಸಾಧನೆ ಮಾಡಿದ ಸುರೇಶ್ ಕುಂಬ್ಳೆ, ಸುರೇಶ ನಾಯ್ಕ್, ಮನೋಹರ ನಾಯ್ಕ್, ಗೋಪಿನಾಥ್ ನಾಯ್ಕ್, ಶ್ರೀಮತಿ ನೇತ್ರಾವತಿ, ಶ್ರೀಮತಿ ನೀತಾ ಗೋಪಿನಾಥ್, ಶ್ರೀಮತಿ ರಮಣಿ, ಭಾಸ್ಕರ ಕೆ, ಕುಂಞಿರಾಮ ಮೊದಲಾದವರಿಗೆ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಬಬಿತಾ ಕಾಸರಗೋಡು ಇವರ ಗಾಯನ ಕಾರ್ಯಕ್ರಮ ಪ್ರೇಕ್ಷಕರ ಮನಸೂರೆಗೊಂಡಿತು. ಆರಂಭದಲ್ಲಿ ಹೂವಿನ ರಂಗೋಲಿ ಸ್ಪರ್ಧೆ ಏರ್ಪಡಿಸಲಾಯಿತು.


ಪ್ರಥಮ ಸ್ಥಾನ ನೇತ್ರಾವತಿ ಬಳಗ, ದ್ವಿತೀಯ ಸ್ಥಾನ ಸುರೇಶ ನಾಯ್ಕ್ ಬಳಗ ಹಾಗೂ ಪ್ರಸಾದ್ ನೇತ್ರಾಲಯದ ಪ್ರಿಯ ಬಳಗ ಮತ್ತು ತೃತೀಯ ಸ್ಥಾನವನ್ನು ದಾಮೋದರ ಮತ್ತು ಬಳಗದವರು ಗಳಿಸಿದರು. ವಿಜೇತರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಆರಂಭದಲ್ಲಿ ಶ್ರೀಮತಿ ರಮನಿಯವರಿಂದ ಪ್ರಾರ್ಥನೆ ಹಾಡಿದರು. ಭಾಸ್ಕರ ಕೆ, ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಸುರೇಶ ಕೆ. ಧನ್ಯವಾದ ಸಲ್ಲಿಸಿದರು. ಸುರೇಂದ್ರ ಕೆ, ಶೋಭಾ ನಾಯ್ಕ್, ತಾರನಾಥ, ಆಶಾ ನಾಯ್ಕ್, ಗಣೇಶ ಪ್ರಸಾದ್ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ರಾಷ್ಟಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.
ಎಲ್ಲರಿಗೂ ಲಘು ಉಪಹಾರ ವ್ಯವಸ್ಥೆ ಮಾಡಲಾಗಿತ್ತು.

