ಆಳಸಮುದ್ರದಲ್ಲಿ ಮೀನುಗಾರಿಕೆ ವೇಳೆ ದೋಣಿಯಲ್ಲೇ ಕುಸಿದು ಹಿರಿಯ ಕಾರ್ಮಿಕ ಸಾವು

​ಕಾಸರಗೋಡು: ಆಳಸಮುದ್ರದಲ್ಲಿ ಮೀನುಗಾರಿಕೆಯಲ್ಲಿ ನಿರತರಾಗಿದ್ದ ಹಿರಿಯ ಕಾರ್ಮಿಕರೊಬ್ಬರು ದೋಣಿಯಲ್ಲೇ ಕುಸಿದುಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ.ಅಡ್ಕತ್ತಬೈಲು ಶ್ರೀ ಸತ್ಯನಾರಾಯಣ ಮಠದ ಸಮೀಪದ ‘ಕೃಷ್ಣ ನಿಲಯ’ದ ಕೆ. ಬಾಬು (60) ಸಾವನ್ನಪ್ಪಿದ ದುರ್ದೈವಿ.

​ ಮಂಗಳವಾರ ಬೆಳಿಗ್ಗೆ ಎಂಟು ಮಂದಿಯ ಮೀನುಗಾರರ ತಂಡದೊಂದಿಗೆ ಇವರು ಸಮುದ್ರಕ್ಕೆ ತೆರಳಿದ್ದರು. ಕೆಲಸದ ನಡುವೆ ಬಾಬು ಅವರಿಗೆ ದಿಢೀರ್ ತೀವ್ರ ಎದೆನೋವು ಕಾಣಿಸಿಕೊಂಡು ದೋಣಿಯಲ್ಲೇ ಕುಸಿದುಬಿದ್ದರು.ತಕ್ಷಣವೇ ಇತರ ಮೀನುಗಾರರು ಅವರನ್ನು ದಡಕ್ಕೆ ತಂದು ಆಸ್ಪತ್ರೆಗೆ ದಾಖಲಿಸಿದರಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

SHARE
Loading spinner

One thought on “ಆಳಸಮುದ್ರದಲ್ಲಿ ಮೀನುಗಾರಿಕೆ ವೇಳೆ ದೋಣಿಯಲ್ಲೇ ಕುಸಿದು ಹಿರಿಯ ಕಾರ್ಮಿಕ ಸಾವು

Leave a Reply

Your email address will not be published. Required fields are marked *

error: Content is protected !!