ಧರ್ಮಸ್ಥಳ ಭಜನಾ ಕಮ್ಮಟ ಸಿದ್ಧತಾ ಸಭೆ

ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ತಿನ ಕೇಂದ್ರ ಸಮಿತಿಯ ನೇತೃತ್ವದಲ್ಲಿ ಹಾಗೂ ಧರ್ಮಾಧಿಕಾರಿ ಡಾl ಡಿ. ವೀರೇಂದ್ರ ಹೆಗ್ಗಡೆ-ಶ್ರೀಮತಿ ಹೇಮಾವತಿ ಅಮ್ಮನವರ ಶುಭಾಶೀರ್ವಾದಗಳೊಂದಿಗೆ ಸೆಪ್ಟೆಂಬರ್ 28 ರಿಂದ ಒಕ್ಟೋಬರ್ 4 ನೇ ತಾರೀಕಿನ ತನಕ ಧರ್ಮಸ್ಥಳದಲ್ಲಿ ಜರಗಲಿರುವ 28 ನೇ ವರುಷದ ಭಜನಾ ಕಮ್ಮಟದ ಸಿದ್ಧತಾ ಸಭೆಯು ಕಾಸರಗೋಡು ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದ ವ್ಯಾಸ ಮಂಟಪದಲ್ಲಿ ತಾಲೂಕು ಭಜನಾ ಪರಿಷತ್ತಿನ ಅಧ್ಯಕ್ಷರಾದ ಡಾl ಕೆ.ಎನ್.ವೆಂಕಟ್ರಮಣ ಹೊಳ್ಳ ಇವರ ಅಧ್ಯಕ್ಷತೆಯಲ್ಲಿ ಜರುಗಿತು.

ಈ ವರುಷದ ಕಮ್ಮಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಿಬಿರಾರ್ತಿಗಳು ಮಂಗಳೋತ್ಸವದಲ್ಲಿ ಭಜಕರು ಭಾಗಿಯಾಗಬೇಕೆಂದು ವಿನಂತಿಸಿದರು. ಗೌರವಾಧ್ಯಕ್ಷ ಹರಿದಾಸ ಜಯಾನಂದ ಕುಮಾರ ಹೊಸದುರ್ಗ ಅವರು ಶ್ರೀ ಕ್ಷೇತ್ರದ ಇತಿಹಾಸ ಭಜನಾ ಪರಿಷತ್ ನಡೆದು ಬಂದ ದಾರಿ ವಿವರವಾಗಿ ನುಡಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿಯ ಕಾಸರಗೋಡು ಯೋಜನಾಧಿಕಾರಿ ಶ್ರೀ ದಿನೇಶ್ ಅವರು ಕಮ್ಮಟ, ಶಿಬಿರಾರ್ತಿಗಳು, ಸಾಧಕ ಪ್ರಶಸ್ತಿ, ಪರಿಷತ್ತಿನ ಮುಂದಿನ ಯೋಜನೆಗಳೇನು ಎಂಬುದಾಗಿ ವಿಸ್ತಾರವಾಗಿ ಮನವರಿಕೆ ಗೈದರು.

ಸಭೆಯಲ್ಲಿ ವಿವಿಧ ಭಜನಾ ಮಂದಿರಗಳ ಪದಾಧಿಕಾರಿಗಳಾದ ಶ್ರೀ ರಾಮ, ಗುಣಪಾಲ ಅಮೈ, ತುಕಾರಾಮ ಕೆರೆಮನೆ, ಯಶೋಧ, ಶ್ರೀಲತಾ ಟೀಚರ್, ವಿಜಯ ಶೆಟ್ಟಿ, ಗ್ರಾಮಾಭಿವೃದ್ಧಿಯ ಮೇಲ್ವಿಚಾರಕರಾದ ಗೋಪಾಲಕೃಷ್ಣ ಸುಳ್ಯ, ಸುರೇಶ್, ರಮೇಶ್, ರತುಗುಣ, ರಮೇಶ ಹಾಗೂ ಭಜಕರು ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಕಾಸರಗೋಡು ಭಜನಾ ಪರಿಷತ್ ತಾಲೂಕು ಸಮಿತಿಯ ಪ್ರಧಾನ ಕಾರ್ಯದರ್ಶಿ ಪದ್ಮನಾಭ ಆಚಾರ್ಯ ಸ್ವಾಗತಿಸಿ ಕಾರ್ಯದರ್ಶಿ ಲೋಹಿತ್ ಧನ್ಯವಾದವಿತ್ತರು.

SHARE
Loading spinner

Leave a Reply

Your email address will not be published. Required fields are marked *

error: Content is protected !!