2013ರ ಕೊಲೆ ಯತ್ನ ಪ್ರಕರಣ: ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಬಂಧನ

​ ಕಾಸರಗೋಡು : 2013 ರಲ್ಲಿ ಚೆರ್ಕಳ ಬಳಿಯ ಸಂತೋಷ್‌ನಗರದಲ್ಲಿ ನಡೆದ ಜ್ಯೋತಿಷ್ ಎಂಬವರ ಕೊಲೆ ಯತ್ನ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ವಿದ್ಯಾನಗರ ಪೊಲೀಸರು ಕೊಯಂಬತ್ತೂರಿನಲ್ಲಿ ಬಂಧಿಸಿದ್ದಾರೆ.ತಳಂಗರೆ ಪಳ್ಳಿಕ್ಕಾಲ್ ನಿವಾಸಿ ಅಬ್ದುಲ್ ಶಹೀರ್ ಅನಸ್ ( 33) ಬಂಧಿತ ವ್ಯಕ್ತಿ.

​ಆರಂಭದಲ್ಲಿ ಬಂಧಿತನಾಗಿದ್ದ ಈತ, ಜಾಮೀನು ಪಡೆದು ಹೊರಬಂದ ನಂತರ ನ್ಯಾಯಾಲಯದ ವಿಚಾರಣೆಗೆ ಗೈರುಹಾಜರಾಗಿದ್ದನು. ಈ ಹಿನ್ನೆಲೆಯಲ್ಲಿ ಕಾಸರಗೋಡು ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಈತನನ್ನು ತಲೆಮರೆಸಿಕೊಂಡ ಆರೋಪಿ ಎಂದು ಘೋಷಿಸಿ ವಾರಂಟ್ ಹೊರಡಿಸಿತ್ತು.

ಸದ್ಯ ಪೊಲೀಸರು ಈತನನ್ನು ಸೆರೆಹಿಡಿದಿದ್ದಾರೆ. ಇನ್ನು ಈ ಪ್ರಕರಣದ ಸಂತ್ರಸ್ತ ಜ್ಯೋತಿಷ್ ಅವರು ಕೆಲವು ವರ್ಷಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿದ್ದರು

SHARE
Loading spinner

Leave a Reply

Your email address will not be published. Required fields are marked *

error: Content is protected !!