
ಕಾಸರಗೋಡು : ಜಿಲ್ಲೆಯ ಕುತ್ತಿಕ್ಕೋಲ್ ಪಡುಪಿನಲ್ಲಿ ಯುವಕನೊಬ್ಬನ ಮೇಲೆ ಮಾರಕಾಯುಧದಿಂದ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಲಾಗಿದೆ.ಕರಿವೇದಕದ ಶಂಕರಂಪಾಡಿಯ ಪಿ. ಅಬ್ದುಲ್ ಲತೀಫ್ (48) ಎಂಬುವವರು ಈ ಹಲ್ಲೆಗೆ ತುತ್ತಾಗಿದ್ದಾರೆ.

ಗಾಯಗೊಂಡ ಅವರನ್ನು ತಕ್ಷಣವೇ ಪೆರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಪಡುಪು ಎಂಬಲ್ಲಿ ಈ ಘಟನೆ ನಡೆದಿದ್ದು, ಪರಿಚಯಸ್ಥ ಮುಬಾಷಿರ್ ಅವರ ಅಂಗಡಿಯ ಬಳಿ ಕುಳಿತಿದ್ದ ವೇಳೆ ವಿಜೇಶ್ ಎಂಬಾತ ಹಲ್ಲೆ ನಡೆಸಿದ್ದು, ಇನ್ನುಳಿದ ಇಬ್ಬರು ಮುಖಕ್ಕೆ ಹೊಡೆದಿದ್ದಾರೆ ಎಂದು ಅಬ್ದುಲ್ ಲತೀಫ್ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ವಿಜೇಶ್, ವಿಪಿನ್ ಹಾಗೂ ಶಿನೋಜ್ ವಿರುದ್ಧ ಬೇಡ್ಕಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

