₹50 ಲಕ್ಷ ವಿಶೇಷ ಅನುದಾನದಲ್ಲಿ ಕ್ಯಾಸ್ತಲಿನೊ ಕಾಲೋನಿ ರಸ್ತೆ ಅಭಿವೃದ್ಧಿಗೆ ಚಾಲನೆ

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 35ನೇ ಪದವು ಸೆಂಟ್ರಲ್ ವಾರ್ಡಿನ ಕ್ಯಾಸ್ತಲಿನೊ ಕಾಲೋನಿ ರಸ್ತೆ ಅಭಿವೃದ್ಧಿ ಕಾಮಗಾರಿಯು 50 ಲಕ್ಷ ರೂ. ವಿಶೇಷ ಅನುದಾನದಲ್ಲಿ ನಡೆಯಲಿದ್ದು ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ಗುದ್ದಲಿ ಪೂಜೆಯು ನಡೆಯಿತು.

ಈ ವೇಳೆ ಮಾತನಾಡಿದ ಶಾಸಕರು, ಈ ಭಾಗದ ನಿಕಟಪೂರ್ವ ಪಾಲಿಕೆ ಸದಸ್ಯರಾದ ಕಿಶೋರ್ ಕೊಟ್ಟಾರಿಯವರು ಸ್ಥಳೀಯರ ಅನುಕೂಲಕ್ಕಾಗಿ ಇಲ್ಲಿ ಮ್ಯಾನ್ ಹೋಲ್ ಸಹಿತ ರಸ್ತೆಯ ಅಭಿವೃದ್ಧಿ ಆಗಬೇಕು ಎಂದು ಅನೇಕ ಬಾರಿ ಮನವಿ ಮಾಡಿದ್ದರು. ಅದರಂತೆ ರಾಜ್ಯ ಸರ್ಕಾರವು ಪ್ರತೀ ಶಾಸಕರಿಗೆ ನೀಡಿರುವ ಅತ್ಯಲ್ಪ ಅನುದಾನದಲ್ಲೇ ಈ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು. ಕಿಶೋರ್ ಕೊಟ್ಟಾರಿಯವರು ಮಾತನಾಡಿ ಏಳು ವರ್ಷಗಳ ಹಿಂದೆ ಈ ಶಕ್ತಿನಗರ ಭಾಗದಲ್ಲಿದ್ದ ಎಲ್ಲಾ ಮಣ್ಣಿನ ರಸ್ತೆಗಳು ಇಂದು ಕಾಂಕ್ರೀಟ್ ರಸ್ತೆಗಳಾಗಿ ಬದಲಾಗಿವೆ. ಇಂದು ಈ ವಾರ್ಡಿನ ಕೊನೆಯ ಕಾಮಗಾರಿಯೂ ನಡೆಯುತ್ತಿದ್ದು ಇದಕ್ಕೆ ಕಾರಣ ನಮ್ಮ ಶಾಸಕರು ಎಂದು ಹೆಮ್ಮೆಯಿಂದ ಹೇಳುತ್ತೇವೆ. ಆ ಕಾರಣಕ್ಕಾಗಿ ಇಲ್ಲಿನ ಸಮಸ್ತ ಜನತೆಯ ಪರವಾಗಿ ತುಂಬು ಹೃದಯದ ಧನ್ಯವಾದಗಳು ಎಂದರು.

ಪ್ರಮುಖರಾದ ತೇಜಸ್ ಕೊಂಗೂರು, ಹರೀಶ್ ರೈ, ಅಶ್ವಿತ್ ಕೊಟ್ಟಾರಿ, ರವೀಂದ್ರ ಕುಚ್ಚಿಕಾಡ್, ಲ್ಯಾನ್ಸಿ, ಸತೀಶ್ ಕುಮಾರ್, ರಾಮ, ಪ್ರಕಾಶ್, ನವೀನ್, ವಾಸು ರಾಜೀವನಗರ, ಅರ್ಷಾದ್ ಪೋಪಿ, ನಾಗರಾಜ್ ನೀತಿನಗರ, ಜಿನ್ನಪ್ಪ ಮಹಾಕಾಳಿ, ಗ್ರೇಷನ್ ಕೊಂಗೂರು, ಸಾಗರ್, ಸಣ್ಣು, ಭಾಸ್ಕರ್ ಕಕ್ಕೆಬೆಟ್ಟು, ರಾಜೇಶ್, ಚಾರ್ಲಿ, ಜಯರಾಮ್, ಯಾದವ, ಲೋಕೇಶ್ ರಾಜೀವನಗರ್, ಗೋಪಾಲ್, ಹರೀಶ್ ಕೊಂಗೂರು ಸೇರಿದಂತೆ ವಾರ್ಡಿನ ಕಾರ್ಯಕರ್ತರು, ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.

SHARE
Loading spinner

One thought on “₹50 ಲಕ್ಷ ವಿಶೇಷ ಅನುದಾನದಲ್ಲಿ ಕ್ಯಾಸ್ತಲಿನೊ ಕಾಲೋನಿ ರಸ್ತೆ ಅಭಿವೃದ್ಧಿಗೆ ಚಾಲನೆ

Leave a Reply

Your email address will not be published. Required fields are marked *

error: Content is protected !!